HEALTH TIPS

LS polls | ಮೊದಲು ಮತದಾನ, ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು

           ಹಾನಾಬಾದ್ : ಏಳನೇ ಹಂತದ ಮತದಾನ ದಿನವಾದ ಶನಿವಾರ ಇಲ್ಲಿನ ದೇವ್‌ಕುಲಿ ಗ್ರಾಮದಲ್ಲಿ 80 ವರ್ಷದ ವೃದ್ಧೆಯೊಬ್ಬರು ನಿಧನರಾಗಿದ್ದು, ಅವರ ಕುಟುಂಬ ಸದಸ್ಯರು ಮೊದಲು ಮತದಾನ ಮಾಡಿ, ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದರು.

           'ನನ್ನ ತಾಯಿ ಇಂದು ನಿಧನರಾದರು. ಅವರೆಂದೂ ಮರಳಿ ಬರುವುದಿಲ್ಲ.

ಕುಟುಂಬ ಸದಸ್ಯರೆಲ್ಲಾ ಚರ್ಚಿಸಿ ಮೊದಲು ಮತದಾನ ಮಾಡಿ, ಬಳಿಕ ಅಂತ್ಯಸಂಸ್ಕಾರ ನೆರವೇರಿಸುವ ನಿರ್ಧಾರ ಕೈಗೊಂಡೆವು' ಎಂದು ಮೃತ ಮಹಿಳೆಯ ಪುತ್ರ ಮಿಥಿಲೇಶ್‌ ಯಾದವ್‌ ತಿಳಿಸಿದರು.

ಬಿಹಾರದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದೆ.


ಮತಗಟ್ಟೆಯಲ್ಲಿ ಕುಸಿದು ಬಿದ್ದು ಸಾವು

               ಉತ್ತರ ಪ್ರದೇಶದ ಸಲೇಂಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಕ್ ಬಹಾವುದ್ದೀನ್ ಗ್ರಾಮದ ಮತಗಟ್ಟೆಯೊಂದರಲ್ಲಿ ರಾಂಬಚನ್ ಚೌಹಾಣ್ (70) ಎಂಬುವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

            ರಾಂಬಚನ್ ಅವರು ಮತದಾನ ಮಾಡಲು ಸರದಿಯಲ್ಲಿ ನಿಲ್ಲುವುದಕ್ಕೂ ಮುನ್ನ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದೂ ವಿವರಿಸಿದ್ದಾರೆ.

          ಸರದಿಯಲ್ಲಿ ನಿಂತಿದ್ದಾಗ ತಲೆಸುತ್ತು ಬಂದು ರಾಂಬಚನ್ ಅವರು ಕುಸಿದು ಬಿದ್ದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೊದಲ ಬಾರಿ ಹಕ್ಕು ಚಲಾಯಿಸಿದ 92 ವರ್ಷದ ವ್ಯಕ್ತಿ

               ಸಾಹಿಬ್‌ಗಂಜ್‌: ಜಾರ್ಖಂಡ್‌ನ ಸಾಹಿಬ್‌ಗಂಜ್‌ ಜಿಲ್ಲೆಯ ಮತಗಟ್ಟೆಯೊಂದರಲ್ಲಿ 92 ವರ್ಷದ ಅಂಧ ವ್ಯಕ್ತಿಯೊಬ್ಬರು ಮೊದಲ ಬಾರಿ ಮತದಾನ ಮಾಡಿದ್ದಾರೆ.

            ಬದ್‌ಖೋರಿ ಗ್ರಾಮದ ಖಲೀಲ್ ಅನ್ಸಾರಿ ಎಂಬುವವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದು ಪರಿಶೀಲನೆಯ ವೇಳೆ ಜಾರ್ಖಂಡ್‌ನ ಮುಖ್ಯ ಚುನಾವಣಾಧಿಕಾರಿಯ ಗಮನಕ್ಕೆ ಬಂದಿತ್ತು, ಅನ್ಸಾರಿ ಹೆಸರನ್ನು ಕೂಡಲೇ ಮತದಾರರ ಪಟ್ಟಿಗೆ ಸೇರಿಸುವಂತೆ ಅವರು ಸೂಚಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

           'ನಾನು ಮೊದಲ ಬಾರಿ ಮತದಾನ ಮಾಡಿದ್ದೇನೆ' ಎಂದು ಅನ್ಸಾರಿ ಅವರು ಹಕ್ಕು ಚಲಾಯಿಸಿದ ಬಳಿಕ ತಿಳಿಸಿದರು.

ಚುನಾವಣೆ ಬಹಿಷ್ಕಾರ

                   (ಶಿಮ್ಲಾ ವರದಿ): ರಸ್ತೆ, ಇಂಟರ್‌ನೆಟ್‌ ಸೌಲಭ್ಯ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಮಖಾನ್ ಮತ್ತು ಚಾಚುಲ್‌ ಗ್ರಾಮಗಳ ಜನರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದರು.

ಜಿಲ್ಲಾಡಳಿತದ ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

426 ಮಂದಿಯಿಂದ ಮತದಾನ ಬಹಿಷ್ಕಾರ

          ದುಮ್ಕಾ: ಕಲ್ಲಿದ್ದಲು ಸಂಗ್ರಹ ಘಟಕ ನಿರ್ಮಾಣವನ್ನು ವಿರೋಧಿಸಿ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಬಾಗ್ದುಭಿ ಗ್ರಾಮದ 426 ಮಂದಿ ಮತದಾನ ಬಹಿಷ್ಕರಿಸಿದರು.

                ಬಾಗ್ದುಭಿ ಗ್ರಾಮದ ಮತಗಟ್ಟೆ ಸಂಖ್ಯೆ 94ರಲ್ಲಿ 430 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಹಕ್ಕು ಚಲಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದರು.

 ಹಿಮಾಚಲ ಪ್ರದೇಶ‌ದ ಮಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್‌ ಅವರು ಮತ ಚಲಾಯಿಸಿದ ಬಳಿಕ ಬೆರಳಿನ ಶಾಯಿ ಗುರುತನ್ನು ಪ್ರದರ್ಶಿಸಿದರು -ಪಿಟಿಐ ಚಿತ್ರ ತೃಣಮೂಲ ಕಾಂಗ್ರೆಸ್‌ ಮುಖಂಡ ಶತ್ರುಘ್ನ ಸಿನ್ಹಾ ಅವರು ಪಟ್ನಾದಲ್ಲಿ ಮತ ಚಲಾಯಿಸಿದರು -ಪಿಟಿಐ ಚಿತ್ರ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಮತ್ತು ಸಹೋದರ ತೇಜ್‌ ಪ್ರತಾಪ್‌ ಯಾದವ್ ಅವರು ಪಟ್ನಾದಲ್ಲಿ ಮತದಾನ ಮಾಡಿದರು -ಪಿಟಿಐ ಚಿತ್ರ ಚಿತ್ರನಟ ಮಿಥುನ್‌ ಚಕ್ರವರ್ತಿ ಅವರು ಕೋಲ್ಕತ್ತದಲ್ಲಿ ಹಕ್ಕು ಚಲಾಯಿಸಿದರು -ಪಿಟಿಐ ಚಿತ್ರ ತೃಣಮೂಲ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರು ಕೋಲ್ಕತ್ತದಲ್ಲಿ ಮತದಾನ ಮಾಡಿದರು -ಪಿಟಿಐ ಚಿತ್ರ ಬಿಜೆಪಿ ಅಭ್ಯರ್ಥಿ ರವಿಶಂಕರ್‌ ಪ್ರಸಾದ್‌ ಅವರು ಬಿಹಾರದ ಪಟ್ನಾದಲ್ಲಿ ಹಕ್ಕು ಚಲಾಯಿಸಿದ ಬಳಿಕ ಬೆರಳಿನ ಶಾಯಿ ಗುರುತನ್ನು ತೋರಿಸಿದರು -ಪಿಟಿಐ ಚಿತ್ರ ಆರ್‌ಜೆಡಿ ಅಭ್ಯರ್ಥಿ ರೋಹಿಣಿ ಆಚಾರ್ಯ ಅವರು ಬಿಹಾರದ ಪಟ್ನಾದಲ್ಲಿ ಮತ ಚಲಾಯಿಸಿದರು -ಪಿಟಿಐ ಚಿತ್ರ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್‌ ಅವರು ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮತದಾನ ಮಾಡಿದ ಬಳಿಕ ಜಯದ ಸಂಕೇತವನ್ನು ಪ್ರದರ್ಶಿಸಿದರು -ಪಿಟಿಐ ಚಿತ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಛತ್ತೀಸಗಢದ ಬಿಲಾಸ್‌ಪುರ ಜಿಲ್ಲೆಯ ವಿಜಯಪುರದಲ್ಲಿ ಹಕ್ಕು ಚಲಾಯಿಸಿದರು- ಪಿಟಿಐ ಚಿತ್ರ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್ ಅವರು ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಮತದಾನ ಮಾಡಿದ ಬಳಿಕ ಬೆರಳಿನ ಶಾಯಿ ಗುರುತನ್ನು ತೋರಿಸಿದರು -ಪಿಟಿಐ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮತ ಚಲಾಯಿಸಿದ ಬಳಿಕ ಬೆರಳಿನ ಶಾಯಿ ಗುರುತನ್ನು ತೋರಿಸಿದರು -ಪಿಟಿಐ ಚಿತ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries