HEALTH TIPS

NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: CBIಗೆ ವಹಿಸಲು ಬಿಹಾರ CMಗೆ ಡಿಸಿಎಂ ಮನವಿ

          ಟ್ನಾ: 'ನೀಟ್‌' ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಶಂಕಿತ ಆರೋಪಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಅಧಿಕಾರಿಗಳ ಜತೆಗಿನ ಸಂಬಂಧಗಳ ಕುರಿತು ತಿಳಿದುಕೊಳ್ಳಲು ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಮನವಿ ಮಾಡುವುದಾಗಿ ಬಿಹಾರದ ಉಪಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಶುಕ್ರವಾರ ತಿಳಿಸಿದರು.

          ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಕಂದರ್‌ ಪ್ರಸಾದ್‌ ಯದುವೇಂದು ಅವರು ತೇಜಸ್ವಿ ಯಾದವ್‌ ಅವರ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಿನ್ಹಾ ಗುರುವಾರ ಆರೋಪಿಸಿದ್ದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದೂ ಆಗ್ರಹಿಸಿದ್ದರು.

           ಸಿಬಿಐ ಅಥವಾ ಯಾವುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದಕ್ಕೆ ಶಿಫಾರಸು ಮಾಡುವ ವಿಶೇಷ ಅಧಿಕಾರಿ ಮುಖ್ಯಮಂತ್ರಿ ಅವರಿಗಿದೆ. ಹೀಗಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಲಾಗುವುದು ಎಂದು ಅವರು ಪಿಟಿಐಗೆ ತಿಳಿಸಿದರು.

            ಈ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರದ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ಘಟಕ (ಇಒಯು) ಸಹ, ಆರೋಪಿ ಮತ್ತು ಆರ್‌ಜೆಡಿ ನಾಯಕನ ಅಧಿಕಾರಿಗಳ ಜತೆಗಿನ ಸಂಬಂಧದ ಕುರಿತು ತನಿಖೆ ಮಾಡುತ್ತದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದರು.

               'ಆರೋಪಿ ಸಿಕಂದರ್‌ಗೆ ಪಟ್ನಾ ಮತ್ತು ಇತರ ಸ್ಥಳಗಳಲ್ಲಿ ಅತಿಥಿ ಗೃಹಗಳಲ್ಲಿ ವಸತಿ ವ್ಯವಸ್ಥೆಯನ್ನು ಯಾದವ್‌ಗೆ ಸಂಬಂಧಿಸಿದ ಅಧಿಕಾರಿ ಮಾಡುತ್ತಿದ್ದರು. ಈ ಸಂಬಂಧ ಆ ಅಧಿಕಾರಿಯು ಸಿಕಂದರ್‌ಗೆ ಕಳುಹಿಸಿದ್ದ ಮೊಬೈಲ್‌ ಸಂದೇಶಗಳ ವಿವರ ನನ್ನ ಬಳಿ ಇದೆ' ಎಂದು ಡಿಸಿಎಂ ಸಿನ್ಹಾ ಗುರುವಾರ ಆರೋಪಿಸಿದ್ದರು.

            ಈ ಕುರಿತು ಆರ್‌ಜೆಡಿ ನಾಯಕ (ತೇಜಸ್ವಿ ಯಾದವ್‌) ಇನ್ನೂ ಏಕೆ ಮೌನವಾಗಿದ್ದಾರೆ ಎಂದೂ ಪ್ರಶ್ನಿಸಿದ ಅವರು, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ರಾಂಚಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಈ ಆರೋಪಿ ಅವರ ಸಹವರ್ತಿಯಾಗಿದ್ದ ಎಂದೂ ಸಿನ್ಹಾ ಆರೋಪಿಸಿದರು.

13 ಜನರ ಬಂಧನ:

               ನೀಟ್‌-ಯುಜಿ ಪ್ರಶ್ನಿ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ಇಲ್ಲಿಯವರೆಗೆ 13 ಜನರನ್ನು ಬಂಧಿಸಿದೆ. ಇವರಲ್ಲಿ ಪರೀಕ್ಷಾ ಅಭ್ಯರ್ಥಿಗಳು, ಅವರ ಪೋಷಕರು ಮತ್ತು ಪ್ರಮುಖ ಆರೋಪಿ ಸಿಕಂದರ್‌ ಪ್ರಸಾದ್‌ ಯದುವೇಂದು ಅವರೂ ಸೇರಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries