ಇಂದೋರ್: ಇಂದೋರ್ ನಲ್ಲಿ ಈ ದಾಖಲೆಗಳು ನಿರ್ಮಾಣವಾಗಿದ್ದು, ಇಲ್ಲಿನ ಮತದಾರ ದೇಶದಲ್ಲೇ ಅತಿ ಹೆಚ್ಚು ಅಂದರೆ 2,18,674 ನೋಟಾ ಮತಗಳನ್ನು ಚಲಾವಣೆ ಮಾಡಿದ್ದಾನೆ.
ಈ ಹಿಂದೆ 2019 ರಲ್ಲಿ ಬಿಹಾರದ ಗೋಪಾಲ್ ಗಂಜ್ ನಲ್ಲಿ ಅತಿ ಹೆಚ್ಚು NOTA ಮತ ಚಲಾವಣೆಯಾಗಿದ್ದವು. ಇನ್ನು ಇಂದೋರ್ ನಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಲಲ್ವಾನಿ 11,75,092 ಮತಗಳಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.
ಲಲ್ವಾನಿ ವಿರುದ್ಧ ಸ್ಪರ್ಧಿಸಿದ್ದ ಎಲ್ಲಾ 13 ಕ್ಯಾಂಡಿಡೇಟ್ ಗಳು ಇಂದೋರ್ ನಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಸಿಂಧುವಾದ ಒಟ್ಟು ಮತಗಳ ಪೈಕಿ 6 ನೇ ಒಂದರಷ್ಟು ಮತಗಳನ್ನು ಅಭ್ಯರ್ಥಿ ಪಡೆಯುವುದಕ್ಕೆ ವಿಫಲವಾದರೆ ಆ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ.
ಇಂದೋರ್ ನಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ.16.28 ರಷ್ಟು ನೋಟ ಮತಗಳು ಚಲಾವಣೆಯಾಗಿವೆ. ಹಾಲಿ ಸಂಸದ ಲಲ್ವಾನಿ ಅವರ ನಿಕಟ ಎದುರಾಳಿ ಬಿಎಸ್ ಪಿಯ ಲಕ್ಷ್ಮಣ್ ಸೋಲಂಕಿ 51,659 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಂತಿ ಬಮ್ ಕೊನೆಯ ಕ್ಷಣದಲ್ಲಿ ಚುನಾವಣೆಯಿಂದ ಹಿಂದೆ ಸರಿದಿದ್ದರು. ಪರಿಣಾಮ ಪ್ರತಿಷ್ಠಿತ ಕಣದಿಂದ ವಿಪಕ್ಷ ಹಿಂದೆ ಸರಿಯುವಂತಾಗಿತ್ತು. ಬಮ್ ಇದಾದ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.
ಮೇ.13 ರಂದು 25.27 ಲಕ್ಷ ಮಂದಿ ಇಂದೋರ್ ನಲ್ಲಿ ಮತಚಲಾವಣೆ ಮಾಡಿ ಶೇ.61.75 ರಷ್ಟು ಮತಚಲಾವಣೆಯಾಗಿತ್ತು. ಈ ಪೈಕಿ 13,43,294 ರಷ್ಟು ಮತಗಳು ಅಸಿಂಧುಗೊಂಡರೆ. ಶೇ.16.28 ರಷ್ಟು ಮತಗಳು ನೋಟಾಗೆ ಬಂದಿದೆ. 2019 ರಲ್ಲಿ, ಇಂದೋರ್‌ನಲ್ಲಿ 5,045 ಮತದಾರರು ನೋಟಾ ಆಯ್ಕೆ ಮಾಡುವುದರೊಂದಿಗೆ ಶೇಕಡಾ 69 ರಷ್ಟು ಮತದಾನವಾಗಿತ್ತು.
2019 ರಲ್ಲಿ ಬಿಹಾರದ ಗೋಪಾಲ್ ಗಂಜ್ ನಲ್ಲಿ 51,660 ಮತಗಳು ನೋಟಾಗೆ ಚಲಾವಣೆಯಾಗಿ, ದಾಖಲೆ ನಿರ್ಮಾಣವಾಗಿತ್ತು.