ಕುಂಬಳೆ: ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಬೆಂಗಳೂರು ವತಿಯಿಂದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ ೧೩ರಂದು ಸೀತಾಂಗೋಳಿ ಸನಿಹದ ಅಲಿಯೆನ್ಸ್ ಸಭಾಂಗನದಲ್ಲಿ ಜರುಗಲಿರುವುದು.
ಕಾರ್ಯಕ್ರಮದ ಯಶಸ್ವಿಗಾಗಿ ಸಮಿತಿ ರಚನಾ ಸಭೆ ಸಭಾಂಗಣದಲ್ಲಿ ಜರುಗಿತು.
ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದವಕೀಲ ಥಾಮಸ್ ಡಿ.ಸೋಜ, ಪುತ್ತಿಗೆ ಗ್ರಾಪಂ ಸದಸ್ಯೆ ಕಾವ್ಯಶ್ರೀ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಕೇಶ್, ಕೆಯುಡಬ್ಲೂö್ಯಜೆ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಜಯಂತ ಪಾಟಾಳಿ, ಪ್ರೊ. ಎ.ಶ್ರೀನಾಥ್, ಡಿ. ಶಂಕರ, ರಾಮಪ್ಪ ಮಂಜೇಶ್ವರ, ಸುಕುಮಾರ ಕುದ್ರೆಪ್ಪಾಡಿ, ವಿಶಾಲಾಕ್ಷ ಪುತ್ರಕಳ, ಅಪ್ಪಣ್ಣ, ಬಲ್ತೀಸ್ ಕ್ರಾಸ್ತ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಖ್ಯಾತ ಉದ್ಯಮಿ, ಆರ್ಯಭಟ ಪ್ರಶಸ್ತಿ ವಿಜೇತ ಕೆ.ಕೆ ಶೆಟ್ಟಿ ಮುಂಡಪ್ಪಳ್ಳ ಅವರನ್ನು ಗೌರವಿಸಲು ತೀರ್ಮಾನಿಸಲಾಯಿತು. ಕಾರ್ಯಖ್ರಮದ ಯಶಸ್ವಿಗಾಗಿ ಬೇಳ ಶೋಕಮಾತಾ ಇಗರ್ಜಿ ಧರ್ಮಗುರು ವಂದನೀಯ ಫಾದರ್ ಸ್ಟಾö್ಯನಿ ಪಿರೇರಾ, ಸಾಯಿರಾಂ ಕೃಷ್ಣ ಭಟ್ ಕಿಳಿಂಗಾರು,Ä್ಲದ್ಯಮಿ ಅಹಮ್ಮದ್ ಅಬ್ದುಲ್ಲ, ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಮುಖ್ಯ ರಕ್ಷಾಧಿಕಾರಿಗಳಾಗಿರುವ ಸಮಿತಿ ರಚಿಸಲಾಯಿತು.
ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಪೆರ್ಲ ವಂದಿಸಿದರು.