HEALTH TIPS

Sikkim Assembly: ಭಾರತ ಫುಟ್ಬಾಲ್‌ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾಗೆ ಸೋಲು

              ಗ್ಯಾಂಗ್ಟಕ್: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಪಕ್ಷದ ಉಪಾಧ್ಯಕ್ಷ ಬೈಚುಂಗ್ ಭುಟಿಯಾ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ)ದ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.

          ಬಾರ್ಫುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಬೈಚುಂಗ್ ಭುಟಿಯಾ ಸ್ಪರ್ಧೆ ಮಾಡಿದ್ದರು.

ಬೈಚುಂಗ್ ಭುಟಿಯಾ ಅವರು ಎಸ್‌ಕೆಎಂ ಅಭ್ಯರ್ಥಿ ದೋರ್ಜಿ ಭುಟಿಯಾ ವಿರುದ್ಧ 4346 ಮತಗಳಿಂದ ಸೋತಿದ್ದಾರೆ.

                ದೋರ್ಜಿ ಭುಟಿಯಾ 8,358 ಮತಗಳನ್ನು ಪಡೆದರೆ, ಬೈಚುಂಗ್ ಭುಟಿಯಾ 4,012 ಮತಗಳನ್ನು ಪಡೆದರು. ಇದೇ ಕ್ಷೇತ್ರದಲ್ಲಿ ಸಿಎಪಿ ಪಕ್ಷದ ಅಭ್ಯರ್ಥಿ 656 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ತಾಶಿ ಭುಟಿಯಾ ಕೇವಲ 298 ಮತಗಳನ್ನು ಪಡೆದರು.

ವಿಧಾನಸಭಾ ಚುನಾವಣೆಗೂ ಮೊದಲು ಬೈಚುಂಗ್ ಭುಟಿಯಾ ತಮ್ಮ ಹಮ್ರೊ ಸಿಕ್ಕಿಂ ಪಕ್ಷವನ್ನು ಎಸ್‌ಡಿಎಫ್‌ನೊಂದಿಗೆ ವಿಲೀನಗೊಳಿಸಿದ್ದರು.

             ಸಿಕ್ಕಿಂ ವಿಧಾನಸಭೆಯ 32 ಕ್ಷೇತ್ರಗಳ ಪೈಕಿ ಎಸ್‌ಕೆಎಂ 31 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ.

2019ರವರೆಗೆ ಸತತವಾಗಿ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದ ವಿರೋಧ ಪಕ್ಷ ಎಸ್‌ಡಿಎಫ್‌ ಕೇವಲ                 ಒಂದು ಸ್ಥಾನವನ್ನು ಗಳಿಸಲು ಸಾಧ್ಯವಾಯಿತು. ಎಸ್‌ಡಿಎಫ್‌ ಅಧ್ಯಕ್ಷ ಪವನ್ ಕುಮಾರ್ ಚಾಮ್ಲಿಂಗ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries