ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ (ಜೂನ್ 07) ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವುದಾಗಿ ತಿಳಿಸಿದ ಬಳಿಕ ಬಾಂಬೆ ಷೇರುಪೇಟೆ ಸೂಚ್ಯಂಕ ಭರ್ಜರಿ ಏರಿಕೆ ಕಂಡಿತ್ತು.
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ (ಜೂನ್ 07) ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವುದಾಗಿ ತಿಳಿಸಿದ ಬಳಿಕ ಬಾಂಬೆ ಷೇರುಪೇಟೆ ಸೂಚ್ಯಂಕ ಭರ್ಜರಿ ಏರಿಕೆ ಕಂಡಿತ್ತು.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,600ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ದಾಖಲೆಯ 76,787 ಅಂಕಗಳ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಲೋಕಸಭಾ ಚುನಾವಣೆಯ ಫಲಿತಾಂಶದ ದಿನವಾದ ಮಂಗಳವಾರ ಷೇರುಪೇಟೆ ಸೂಚ್ಯಂಕ 3,000 ಸಾವಿರಕ್ಕೂ ಅಧಿಕ ಅಂಕಗಳು ಪತನಗೊಂಡು, ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿತ್ತು.
ಸೆನ್ಸೆಕ್ಸ್ ಏರಿಕೆಯಿಂದ ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರ, ಬಜಾಜ್ ಫಿನ್ ಸರ್ವ್, ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಷೇರುಗಳು ಲಾಭಗಳಿಸಿವೆ.
ಭಾರತೀಯ ಜನತಾ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಬಳಿಕ ಬುಧವಾರದಿಂದ ಷೇರುಪೇಟೆ ಸೂಚ್ಯಂಕ ಜಿಗಿತ ಕಾಣತೊಡಗಿತ್ತು.