HEALTH TIPS

UGC-NET 2024: ಹೊಸ ಪರೀಕ್ಷಾ ದಿನಾಂಕ ಪ್ರಕಟಿಸಿದ NTA

ನವದೆಹಲಿ: ನೀಟ್ ಪೇಪರ್ ಸೋರಿಕೆ ಹಗರಣದ ಬೆನ್ನಲ್ಲೇ UGC-NET ಪರೀಕ್ಷೆಗೆ ಹೊಸ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಇದೀಗ ಪರೀಕ್ಷೆಯನ್ನು ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರ ನಡುವೆ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು ಪ್ರಕಟಿಸಿದೆ. ಡಾರ್ಕ್‌ನೆಟ್‌ನಲ್ಲಿ ಪತ್ರಿಕೆ ಸೋರಿಕೆಯಾದ ನಂತರ ಪರೀಕ್ಷೆಯನ್ನು ರದ್ದುಗೊಳಿಸಿದ ಒಂದು ವಾರದ ನಂತರ ಈ ಘೋಷಣೆ ಮಾಡಲಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯ UGC NEET ಹೊಸ ಪರೀಕ್ಷೆಯ ಹೊಸ ದಿನಾಂಕಗಳ ಪ್ರಕಾರ, UGC NEET 2024ರ ಜೂನ್ ಪರೀಕ್ಷೆಯನ್ನು 2024ರ ಆಗಸ್ಟ್ 21 ರಿಂದ 2024ರ ಸೆಪ್ಟೆಂಬರ್ 04ರ ನಡುವೆ ನಡೆಸಲಾಗುವುದು. ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಾಗಿರುತ್ತದೆ. NCET 2024 ಪರೀಕ್ಷೆಯು ಜುಲೈ 10 ರಂದು ನಡೆಯಲಿದೆ. ಜಂಟಿ CSIR UGC NET ಅನ್ನು ಜುಲೈ 25 ರಿಂದ 27 ರವರೆಗೆ ನಡೆಸಲಾಗುವುದು. ಅದೇ ಸಮಯದಲ್ಲಿ, ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ.

ಈ ಹಿಂದೆ ಮುಂದೂಡಲಾಗಿದ್ದ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಎನ್‌ಸಿಇಟಿ) ಈಗ ಜುಲೈ 10 ರಂದು ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. CSIR-UGC ನೆಟ್ ಪರೀಕ್ಷೆಯನ್ನು ಜುಲೈ 25-27 ರಿಂದ ನಡೆಸಲಾಗುವುದು. ಯುಜಿಸಿ-ನೆಟ್ ಪರೀಕ್ಷೆಗಳನ್ನು ಆಗಸ್ಟ್ 21 ರಿಂದ ಸೆಪ್ಟೆಂಬರ್ 4 ರವರೆಗೆ ಹೊಸದಾಗಿ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಪರೀಕ್ಷೆಯನ್ನು ಜೂನ್ 18ರಂದು ನಡೆಸಲಾಗಿತ್ತು. ಆದರೆ ಪೇಪರ್ ಲೀಕ್ ಹಿನ್ನಲೆ ಮಾರನೇ ದಿನ ರದ್ದುಗೊಳಿಸಲಾಯಿತು.

ಇದೇ ವೇಳೆ ಪತ್ರಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಶುಕ್ರವಾರ ಮೂರನೇ ದಿನವೂ ಮುಂದುವರಿದಿದೆ. ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ) ಮತ್ತು ದೆಹಲಿ ವಿಶ್ವವಿದ್ಯಾಲಯದ ಕ್ರಾಂತಿಕಾರಿ ಯುವ ಸಂಘಟನೆ (ಕೆವೈಎಸ್) ಸೇರಿದಂತೆ ವಿವಿಧ ಗುಂಪುಗಳು ಜಂತರ್ ಮಂತರ್‌ನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ಪರೀಕ್ಷೆಗಳಲ್ಲಿ ಆಪಾದಿತ ರಿಗ್ಗಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries