ನವದೆಹಲಿ: ಇಂದು ಜೂನ್ 5, ವಿಶ್ವ ಪರಿಸರ ದಿನ. ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಏಕ್ ಪೆಡ್ ಮಾ ಕೆ ನಾಮ್’(ಅಮ್ಮನ ಹೆಸರಿನಲ್ಲಿ ಒಂದು ವೃಕ್ಷ) ಅಭಿಯಾನವನ್ನು ಪರಿಚಯಿಸಿದರು. ಅವರು ದೆಹಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿ ಅಶ್ವತ್ಥ ಮರದ ಸಸಿಯನ್ನು ನೆಡುವ ಮೂಲಕ ದಿನಾಚರಣೆಯನ್ನು ಅರ್ಥವತ್ತಾಗಿಸಿದರು..
ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದರ್ ಯಾದವ್ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಪ್ರಧಾನಿಯವರಿಗೆ ಸಾಥ್ ನೀಡಿದರು.