ಕಾಸರಗೋಡು: ಪುರಾತನ ಹಾಗೂ ಇತಿಹಾಸ ಪ್ರಸಿದ್ಧ, ಮೀಂಜ ಪಂಚಾಯಿತಿಯ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಚಿನ್ನ ಹಾಗೂ ಬೆಳ್ಳಿ ಆಭರಣ ಕಳವುಗೈದ ಪ್ರಕರಣಕ್ಕೆ ಸಂಬAಧಿಸಿ ಕಾಸರಗೋಡು ಡಿವೈಎಸ್‌ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಶ್ವಾನ ಹಾಗೂ ಬೆರಳಚ್ಚು ದಳ ಆಗಮಿಸಿ ತಪಾಸಣೆ ನಡೆಸಿತು. ದೇವಸ್ಥಾನ ವಠಾರದಲ್ಲಿ ಸಉತ್ತಾಡಿರುವ ಶ್ವಾನ ನಂತರ ರಸ್ತೆವರೆಗೂ ಸಆಗಿ ನಿಂತಿದೆ. ಗರ್ಭಗುಡಿಯಿಂದ ಬೆರಳಚ್ಚು ಸಂಗ್ರಹಿಸಲಾಗಿದೆ.
ಗರ್ಭಗುಡಿಗೆ ನುಗ್ಗಿದ ಕಳ್ಳರು ಶ್ರೀದೇವರ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ದೋಚಿದ್ದರು. ಸುತ್ತುಗೋಪುರದ ಮಹಡಿಯೇರಿ, ಒಳಗೆ ಇಳಿದು ಕೃತ್ಯವೆಸಗಲಾಗಿತ್ತು. ಕಳೆದ ಎರಡು ತಿಂಗಳ ಕಾಲಾವಧಿಯಲ್ಲಿ ಮಂಜೇಶ್ವರ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರಾಧನಾಲಯ, ಮನೆಗಳಿಂದ ವ್ಯಾಪಕವಾಗಿ ಕಳವು ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬAಧಿಸಿ ಆರೋಪಿಗಳ ಪತ್ತೆ ಸಾಧ್ಯವಾಗದಿರುವುದನ್ನು ಮನಗಂಡು ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ರಾತ್ರಿ ವೇಳೆ ವಾಹನ ಪೆಟ್ರೋಲಿಂಗ್ ಚುರುಕುಗೊಳಿಸಲಾಗಿದೆ.