ಕಾಸರಗೋಡು: ಕೇಂದ್ರ ಸರ್ಕಾರದ ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ಕೇರಳ ರಾಜ್ಯವನ್ನು ಕಡೆಗಣಿಸಿರುವುದಾಗಿ ಆರೋಪಿಸಿ ಯುವ ಕಾಂಗ್ರೆಸ್ ಕಾಸರಗೋಡು ಮಂಡಲ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಪ್ರತಿಭಟನೆ ನಡೆಸಲಾತು.
ಐಕ್ಯರಂಗ(ಯುಡಿಎಫ್) ಜಿಲ್ಲಾ ಸಮಿತಿ ಕಾರ್ಯದರ್ಶಿ ವಕೀಲ ಎ ಗೋವಿಂದನ್ ನಾಯರ್ ಪ್ರತಿಭಟನಾ ಸಭೆ ಉದ್ಘಾಟಿಸಿದರು. ಘಟಕ ಅಧ್ಯಕ್ಷ ದಿಲೀಪ್ ಪುಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೀವನ್ ನಂಬಿಯಾರ್, ಅರ್ಜುನನ್ ತಾಯಲಂಗಡಿ, ಟೋನಿ ಕಾಸರಗೋಡು, ಪಿ.ಕೆ.ವಿಜಯನ್, ಶಾಹಿದ್ ಪುಲಿಕ್ಕುನ್ನು, ಸಂತೋಷ್ ಕ್ರಾಸ್ತಾ, ಸಾಜಿದ್ ಕೊಲ್ಲಂಗಾನ, ಸುಜಿತ್ ಕುಮಾರ್, ಸಯಾಫ್ ತೆರುವತ್, ಸಮೀರ್ ತಳಂಗರ, ಅಖಿಲೇಶ್ ಪಿ.ಕೆ., ಸಮೀರ್ ಕೊರಕ್ಕೋಡು, ಫಹಾದ್ ಕುನ್ನಿಲ್ ಮೊದಲದವರು ಉಪಸ್ಥಿತರಿದ್ದರು.