ನವದೆಹಲಿ: ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಪ್ರಮುಖ 10 ದೇಶಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ (FAO) ವರದಿ ತಿಳಿಸಿದೆ. ಭಾರತವು 2010ರಿಂದ 2020ರವರೆಗೆ ವಾರ್ಷಿಕವಾಗಿ 2,66,000 ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸೋಮವಾರ ಬಿಡುಗಡೆಯಾದ ವರದಿಯ ಪ್ರಕಾರ, ಚೀನಾವು 1,937,000 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. 4,46,000 ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಭಾರತ 3ನೇ ಸ್ಥಾನದಲ್ಲಿದೆ. ಟಾಪ್ 10ರ ಪಟ್ಟಿಯಲ್ಲಿರುವ ಇತರ ದೇಶಗಳಲ್ಲಿ ಚಿಲಿ, ವಿಯೆಟ್ನಾಂ, ಟರ್ಕಿ, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಇಟಲಿ ಮತ್ತು ರೊಮೇನಿಯಾ ಸೇರಿವೆ.
ನವೀನ ವಿಧಾನಗಳ ಮೂಲಕ ಅರಣ್ಯ ಪ್ರದೇಶವನ್ನು ವಿಸ್ತರಿಸುವಲ್ಲಿನ ಪ್ರಯತ್ನಗಳಿಗಾಗಿ ಯುಎನ್ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ.
ಕೆಲವು ದೇಶಗಳಲ್ಲಿ ಅರಣ್ಯನಾಶವಾದ ಬಗ್ಗೆಯೂ ವರದಿಯಲ್ಲಿ ಹೇಳಲಾಗಿದೆ. ಹವಾಮಾನ ಬದಲಾವಣೆ, ಕಾಳ್ಗಚ್ಚಿನಂತಹ ಪ್ರಾಕೃತಿಕ ವಿಕೋಪಗಳು ಅರಣ್ಯ ನಾಶಕ್ಕೆ ಕಾರಣ ಎಂದು ಎಫ್‌ಎಒ ಹೇಳಿದೆ.