HEALTH TIPS

ಪಂಬಾದಿಂದ ಶಬರಿಮಲೆ ಸನ್ನಿಧಿಗೆ ರೋಪ್‍ವೇಗೆ ಶೀಘ್ರ ಅನುಮೋದನೆ: ನಿಲಯ್ಕಲ್‍ನಲ್ಲಿ 10,000 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ: ಸಚಿವ

               ಶಬರಿಮಲೆ: ಪಂಬಾದಿಂದ ಸನ್ನಿಧಾನದವರೆಗೆ ರೋಪ್ ವೇ ವ್ಯವಸ್ಥೆಗೆ ಶೀಘ್ರವೇ ಅನುಮತಿ ನೀಡಲಾಗುವುದು ಎಂದು ದೇವಸ್ವಂ ಸಚಿವ ವಿ.ಎನ್. ವಾಸವನ್ ತಿಳಿಸಿದ್ದಾರೆ. ಈ ಸಂಬಂಧ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಶೀಘ್ರದಲ್ಲೇ ಅಂತಿಮ ಅನುಮೋದನೆ ದೊರೆಯಲಿದೆ. ಪಂಬಾ ಬೆಟ್ಟದಿಂದ ಸನ್ನಿಧಾನಂ ವರೆಗೆ 2.7 ಕಿ.ಮೀ. ರೋಪ್ ವೇ ನಿರ್ಮಾಣವಾಗಲಿದೆ. 

               ಮುಂಬರುವ ಮಂಡಲ ಮತ್ತು ಮಕರ ಬೆಳಕು ಯಾತ್ರೆಯ ಸಿದ್ಧತೆಗಳ ಕುರಿತು ಚರ್ಚಿಸಲು ಪಂಪಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಪರಿಶೀಲನಾ ಸಭೆಯ ನಂತರ ಸಚಿವರು ಪತ್ರಕರ್ತರೊಂದಿಗೆ ಮಾತನಾಡಿದರು. 

          ಸರ್ಕಾರ ಮತ್ತು ದೇವಸ್ವಂ ಮಂಡಳಿಯು ದೂರು-ಮುಕ್ತ ತೀರ್ಥಯಾತ್ರೆಯ ಕಾಲವನ್ನು ಗುರಿಯಾಗಿರಿಸಿಕೊಂಡಿದೆ. ಒಂದು ವಾರದೊಳಗೆ ತಿರುವನಂತಪುರದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಎಲ್ಲ ಇಲಾಖೆ ಮುಖ್ಯಸ್ಥರ ಸಭೆ ನಡೆಯಲಿದೆ. ನಂತರ ಜನಪ್ರತಿನಿಧಿಗಳು ಹಾಗೂ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ವಾಹನ ನಿಲುಗಡೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು. ಪ್ರಸ್ತುತ 8000 ವಾಹನಗಳು ಇಲ್ಲಿ ನಿಲುಗಡೆ ಮಾಡಬಹುದು. ಇನ್ನು 2000 ವಾಹನ ನಿಲುಗಡೆಗೆ ವ್ಯವಸ್ಥೆ ಸಿದ್ಧಪಡಿಸಲಾಗುವುದು.

             ಕೆಲವು ಹಂತದಲ್ಲಿ ಪಂಬಾ ಮತ್ತು ಸನ್ನಿಧಾನದÀಲ್ಲಿ ಯಾತ್ರಾರ್ಥಿಗಳ ಜನಸಂದಣಿಯನ್ನು ಕಡಮೆ ಮಾಡಲು ಸಲಹೆಗಳನ್ನು ಸ್ವೀಕರಿಸಲಾಗಿದೆ. ವರ್ಚುವಲ್ ಕ್ಯೂ ಬುಕ್ಕಿಂಗ್‍ಗೆ ಸಂಬಂಧಿಸಿದಂತೆ ಯಾತ್ರಾರ್ಥಿಗಳ ಸುಗಮ ದರ್ಶನಕ್ಕೆ ಹೆಚ್ಚಿನ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

             ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್, ಸದಸ್ಯರಾದ ಅಡ್ವ. ಎ. ಅಜಿಕುಮಾರ್, ಕೆ. ಸುಂದರೇಶನ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ದೇವಸ್ವಂ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಸಂಜೆ ಪ್ರಥಮ ಬಾರಿಗೆ ಪಂಪಾಕ್ಕೆ ಭೇಟಿ ನೀಡಿದ ಸಚಿವರು ಮಂಗಳವಾರ ಸನ್ನಿಧಾನಂ ತಲುಪಿದರು. ತಂತ್ರಿ ಕಂಠಾರರ್ ಮಹೇಶ ಮೋಹನರ್À, ಮೇಲ್ಶಾಂತಿ ಮಹೇಶ ನಂಬೂದಿರಿ ಭೇಟಿ ಮಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries