ಚಂಡೀಗಢ: ಪೊಲೀಸ್, ಅರಣ್ಯ ಗಾರ್ಡ್ ಹಾಗೂ ಜೈಲು ವಾರ್ಡನ್ ಸೇರಿ ಹಲವು ಸರ್ಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ 10ರಷ್ಟು ಮೀಸಲಾತಿ ನೀಡುವುದಾಗಿ ಹರಿಯಾಣ ಸರ್ಕಾರ ಪ್ರಕಟಿಸಿದೆ. ಅಲ್ಲದೆ ವಯಸ್ಸಿನ ಮಿತಿ ಸಡಿಲಿಸುವುದಾಗಿಯೂ ತಿಳಿಸಿದೆ.
ಚಂಡೀಗಢದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ,'ಕಾನ್‌ಸ್ಟೆಬಲ್, ಮೈನಿಂಗ್ ಗಾರ್ಡ್, ಫಾರೆಸ್ಟ್ ಗಾರ್ಡ್, ಜೈಲ್ ವಾರ್ಡನ್ ಹಾಗೂ ವಿಶೇಷ ಪೊಲೀಸ್ ಅಧಿಕಾರಿ ಹುದ್ದೆಗಳಿಗೆ ಸರ್ಕಾರ ಮಾಡುವ ನೇರ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ 10ರಷ್ಟು ಮೀಸಲಾತಿ ಇರಲಿದೆ' ಎಂದು ಹೇಳಿದ್ದಾರೆ.
ಅಲ್ಲದೆ ಗ್ರೂಪ್ ಸಿ ಹಾಗೂ ಡಿ ಹುದ್ದೆಗಳಿಗೆ ಮೂರು ವರ್ಷಗಳ ವಯಸ್ಸಿನ ಮಿತಿಯನ್ನೂ ಸಡಿಲಗೊಳಿಸಲಾಗುವುದು. ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ಐದು ವರ್ಷಗಳ ರಿಯಾಯತಿ ಇರಲಿದೆ' ಎಂದು ಹೇಳಿದ್ದಾರೆ.