ಕಾಸರಗೋಡು: ಕೇರಳ ಎನ್‍ಜಿಒ ಸಂಘದ ರಾಜ್ಯ ಸಮ್ಮೇಳನ ಜುಲೈ 11, 12 ಮತ್ತು 13 ರಂದು ಕಾಸರಗೋಡಿನಲ್ಲಿ ನಡೆಯಲಿರುವುದಾಗಿ ಸಂಘಟನೆ ರಾಜ್ಯಾಧ್ಯಕ್ಷ ಟಿ.ಎನ್.ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
11ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ನಗರಸಭಾಂಗಣದಲ್ಲಿ ವಿಷಯಮಂಡನಾ ಸಮಿತಿ ಸಭೆ ನಡೆಯುವುದು. ಮಧ್ಯಾಹ್ನ ನಡೆಯುವ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ವಕೀಲ ಮುರಲೀಧರನ್ ಉದ್ಗಾಟಿಸುವರು. ಎನ್ ಜಿಒ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಶ್ರೀಕುಮಾರ್ ಅಧ್ಯಕ್ಷತೆ ವಹಿಸುವರು. 12 ರಂದು ಬೆಳಗ್ಗೆ 10 ಕ್ಕೆ ಕಾಸರಗೋಡು ನಗರಸಭಾಂಗಣದ 'ಗೋಪಾಲ್ ಚೆಟ್ಟಿಯಾರ್ ನಗರ'ದಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನವನ್ನು ಬಿಎಂಎಸ್ ಅಖಿಲ ಭಾರತ ಅಧ್ಯಕ್ಷ ಹಿರಣ್‍ಮಯೀ ಪಾಂಡ್ಯ ಉದ್ಘಾಟಿಸುವರು. ದಕ್ಷಿಣ ಕ್ಷೇತ್ರೀಯ ಸಹಕಾರ್ಯದರ್ಶಿ ಎಂ.ಪಿ.ರಾಜೀವನ್ ಪ್ರಧಾನ ಭಾಷಣ ಮಾಡುವರು. ಮಧ್ಯಾಹ್ನ 12 ಗಂಟೆಗೆ ಬಿಎಂಎಸ್ ರಾಜ್ಯಾಧ್ಯಕ್ಷ ಶಿವಾಜಿ ಸುದರ್ಶನನ್ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸುವರು. 2ಗಂಟೆಗೆ ನಡೆಯುವ ಸಾಂಸ್ಕøತಿಕ ಸಮ್ಮೇಳನವನ್ನು ಆರ್ ಎಸ್ ಎಸ್ ಪ್ರಾಂತೀಯ ಬೌದ್ಧಿಕ್ ಪ್ರಮುಖ್ ಕೆ.ಪಿ.ರಾಧಾಕೃಷ್ಣನ್ ಉದ್ಘಾಟಿಸುವರು. ಎನ್‍ಜಿಒ ಸಂಘದ ರಾಜ್ಯ ಉಪಾಧ್ಯಕ್ಷ ಸಿ.ಬಾಬುರಾಜ್ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ಕಾಸರಗೋಡು ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಸಂಧ್ಯಾ ರಾಗಂ ಓಪನ್ ಆಡಿಟೋರಿಯಂನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಆರ್‍ಆರ್‍ಕೆಎಂಎಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ 'ಫೆಟೊ'ರಾಜ್ಯಾಧ್ಯಕ್ಷ ಎಸ್.ಕೆ.ಜಯಕುಮಾರ್ ಉದ್ಘಾಟಿಸುವರು. ಸಂಜೆ 7.30ಕ್ಕೆ ಸಾಂಸ್ಕøತಿಕ ಸಂಜೆ ಕಲಾಕಾರ್ಯಕ್ರಮ ನಡೆಯುವುದು.
13ರಂದು ಬೆಳಗ್ಗೆ 8.30ಕ್ಕೆ ನಗರಸಭಾಂಗಣದ ಶಂಕರ ಗೌಡನಗರದಲ್ಲಿ ನಡೆಯುವ ರಾಜ್ಯ ಕೌನ್ಸಿಲ್ ಸಭೆಯನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಉದ್ಘಾಟಿಸುವರು. ಆರ್‍ಆರ್‍ಕೆಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಸುನೀಲ್ ಕುಮಾರ್ ಆಶಯ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪದಾಧಿಕಾರಿಗಳ ಆಯ್ಕೆ, 3.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಕೆ.ಶಶಿಧರ ಐಎಎಸ್ (ನಿವೃತ್ತ), ಪ್ರಧಾನ ಸಂಚಾಲಕ ಪಿ.ಪೀತಾಂಬರನ್, ಎನ್‍ಜಿಒ ಸಂಘದ ರಾಜ್ಯ ಕಾರ್ಯದರ್ಶಿ ಸಿ.ವಿಜಯನ್, ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ರಂಜಿತ್, ಕಾರ್ಯದರ್ಶಿ ವಿ.ಶ್ಯಾಮಪ್ರಸಾದ್ ಉಪಸ್ಥಿತರಿದ್ದರು.