ತಿರುವನಂತಪುರ: ವಯನಾಡ್ ದುರಂತದ ಹಿನ್ನೆಲೆಯಲ್ಲಿ ಟಿಬೆಟಿಯನ್ ಬೌದ್ಧ ಆಧ್ಯಾತ್ಮಿಕ ನಾಯಕ ದಲೈಲಾಮಾ ಟ್ರಸ್ಟ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 11 ಲಕ್ಷ ರೂಪಾಯಿಗಳನ್ನು ನೀಡಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ವಿಝಿಂಜ ಪೋರ್ಟ್ ಅದಾನಿ ಗ್ರೂಪ್, ಲುಲು ಗ್ರೂಪ್ ಅಧ್ಯಕ್ಷ ಡಾ.ಎಂ.ಎ.ಯೂಸಫಲಿ, ಪ್ರಮುಖ ಉದ್ಯಮಿ ರವಿ ಪಿಳ್ಳೈ ಮತ್ತು ಕಲ್ಯಾಣ್ ಜ್ಯುವೆಲರ್ಸ್ ಮಾಲೀಕ ಕಲ್ಯಾಣ ರಾಮನ್ ತಲಾ 5 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ಕೆಎಸ್‌ಎಫ್‌ಇ 5 ಕೋಟಿ, ಕೆನರಾ ಬ್ಯಾಂಕ್ 1 ಕೋಟಿ, ಕೆಎಂಎAಎಲ್ 50 ಲಕ್ಷ, ಮಹಿಳಾ ಅಭಿವೃದ್ಧಿ ನಿಗಮ 30 ಲಕ್ಷ, ಔಷಧಿ ಅಧ್ಯಕ್ಷೆ ಶೋಭನಾ ಜಾರ್ಜ್ 10 ಲಕ್ಷ ರೂ.ನೀಡಲಿದೆ.
ತಮಿಳುನಾಡು ಮುಖ್ಯಮಂತ್ರಿ ಘೋಷಿಸಿದ್ದ 5 ಕೋಟಿ ಮತ್ತು ತಮಿಳುನಾಡು ಲೋಕೋಪಯೋಗಿ ಸಚಿವ ಇವಿ ವೇಲು ಅವರು ಇಂದು ಕಚೇರಿಯಲ್ಲಿ ಹಸ್ತಾಂತರಿಸಿದರು ಎಂದು ಮುಖ್ಯಮಂತ್ರಿ ತಿಳಿಸಿರುವರು. ತಮಿಳು ಚಿತ್ರರಂಗದ ನಟ ವಿಕ್ರಮ್ 20 ಲಕ್ಷ ರೂ.ನೀಡಲಿದ್ದಾರೆ.
ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಟ್ರಸ್ಟ್ 11 ಲಕ್ಷ ರೂಪಾಯಿ ದೇಣಿಗೆ ಘೋಷಿಸಿರುವುದು ವಿಶೇಷವಾಗಿದೆ. ಎಲ್ಲಾ ಸಚಿವರು ಕೂಡ ಒಂದು ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಎಲ್ಲರೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿರುವರು.