HEALTH TIPS

ಜಡ್ಜ್‌ ಮೊಬೈಲ್‌ ಹ್ಯಾಕ್‌ ಮಾಡಿ ₹1.10 ಲಕ್ಷ ವಂಚನೆ

           ವದೆಹಲಿ: ಮೆಸೇಜಿಂಗ್‌ ಆಯಪ್‌ ಹ್ಯಾಕ್‌ ಮಾಡಿ, ಅದರಿಂದ ಸ್ನೇಹಿತರಿಗೆ ಕರೆ ಮಾಡಿ, ₹1.10 ಲಕ್ಷ ವಂಚನೆ ಮಾಡಿದ್ದಾರೆ ಎಂದು ರೋಹಿಣಿ ಜಿಲ್ಲಾ ಕೋರ್ಟ್‌ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

            ಪ್ರಕರಣ ಸಂಬಂಧಿಸಿ ರೋಹಿಣಿ ಜಿಲ್ಲಾ ಸೈಬರ್ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ದೂರಿನಲ್ಲಿ, 'ಜುಲೈ 11ರಂದು ಮಧ್ಯಾಹ್ನ 12:35ಕ್ಕೆ ಅನಾಮಧೇಯ ನಂಬರ್‌ನಿಂದ ಕರೆ ಬಂದಿತ್ತು. ಬ್ಯಾಂಕ್ ದಾಖಲೆಗಳನ್ನು ನೀಡಲು ಮನೆಯ ಎದುರು 'ಕೊರಿಯರ್‌ ಬಾಯ್‌' ಕಾಯುತ್ತಿದ್ದು, ಅವರಿಗೆ ಕರೆ ಮಾಡಿ ಎಂದು ಎಸ್‌ಎಂಎಸ್‌ ಮೂಲಕ ನಂಬರ್‌ ಕಳುಹಿಸಿದರು. ಆ ಸಂಖ್ಯೆಗೆ ಕರೆ ಮಾಡಿದ ತಕ್ಷಣವೇ ನನ್ನ ಮೆಸೇಜಿಂಗ್‌ ಆಯಪ್‌ ಮತ್ತೊಂದು ಮೊಬೈಲ್‌ನಲ್ಲಿ ನೋಂದಣಿಯಾಯಿತು. ಈ ಸಂದರ್ಭದಲ್ಲಿ ಯಾರೋ ನನ್ನ ಹೆಸರಿನಲ್ಲಿ ಹಣ ಕೇಳಲು ಈ ತಂತ್ರ ಮಾಡಿದ್ದಾರೆ ಎಂಬ ಸಂಗತಿ ತಿಳಿಯಿತು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆ. ಬ್ಯಾಂಕ್‌ ಖಾತೆಯನ್ನೂ ಸ್ಥಗಿತ ಮಾಡಿಸಿದೆ. ಅಷ್ಟರಲ್ಲಿಯೇ ಅವರು ನನ್ನ ಇಬ್ಬರು ಸ್ನೇಹಿತರಿಗೆ ₹1.10 ಲಕ್ಷ ವಂಚನೆ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries