HEALTH TIPS

ವಿಷ ಮಿಶ್ರಿತ ಅರವಣ ನಾಶ ಮಾಡಲು 1.16 ಕೋಟಿ: ಗುತ್ತಿಗೆ ಪಡೆಯಲಿರುವ ಏಟುಮನೂರಿನ ಕಂಪನಿ

                   ಪತ್ತನಂತಿಟ್ಟ: ಏಲಕ್ಕಿಯಲ್ಲಿ ಕ್ರಿಮಿನಾಶಕ ಇರುವ ಕಾರಣ ಪೂರೈಕೆ ಸ್ಥಗಿತಗೊಂಡಿರುವ ಅರವಣ ನಾಶದ ಗುತ್ತಿಗೆಯನ್ನು ಏಟುಮನೂರಿನ ಕಂಪನಿಗೆ ನೀಡಲಾಗಿದೆ.

                    ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡು ಸರ್ಕಾರದ ಆದೇಶ ಬಂದ ನಂತರ ಅರವಣವನ್ನು ವಿಲೇವಾರಿ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಏಟುಮನೂರಿನ ಇಂಡಿಯನ್ ಸೆಂಟ್ರಿಪ್ಯೂಜ್ ಕಂಪನಿಯು ಅರವಣ ನಾಶಕ್ಕೆ ಕೊಟೇಶನ್ ತೆಗೆದುಕೊಂಡಿದೆ.  ಒಂದೂವರೆ ವರ್ಷಗಳಿಂದ ಶಬರಿಮಲೆಯಲ್ಲಿ ಸಂಗ್ರಹವಾಗಿರುವ ಹಾನಿಗೊಳಗಾದ ಅರವಣ qಬ್ಬಗಳನ್ನು ನಾಶಪಡಿಸಲು ಕಂಪನಿಯು 1.16 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದೆ.

                     ಟೆಂಡರ್‍ನಲ್ಲಿ ಅವರ ಬಳಿ ಕಡಮೆ ಮೊತ್ತ ಕಂಡುಬಂತು. ದೇವಸ್ವಂಬೋರ್ಡ್‍ನ ಮಾನದಂಡಗಳನ್ನು ಪೂರೈಸಿದ ಮೂರು ಕಂಪನಿಗಳನ್ನು ಶಾರ್ಟ್‍ಲಿಸ್ಟ್ ಮಾಡಲಾಗಿದೆ. ಈ ಪೈಕಿ ಹಿಂದೂಸ್ತಾನ್ ಲ್ಯಾಟೆಕ್ಸ್ 1.89 ಕೋಟಿ ರೂ. ಮತ್ತು ಅಕ್ವಾಶ್ಯ ವಾಟರ್ ಸೊಲ್ಯೂಷನ್ಸ್ 1.76 ಕೋಟಿ ರೂ.ಗಳನ್ನು ಅರವಣ ನಾಶಪಡಿಸಲು ಬೇಡಿಕೆ ಇಟ್ಟಿದ್ದವು. ಮೂರೂ ಕಂಪನಿಗಳ ಮಾಹಿತಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮಾಳಿಗಪ್ಪುರಂ ದೇವಸ್ಥಾನದ ಪೂರ್ವದಲ್ಲಿರುವ ಕಟ್ಟಡದಲ್ಲಿ ಸಂಗ್ರಹವಾಗಿರುವ ಅರವಣವನ್ನು ಏಟಮನೂರಿನ ಇಂಡಿಯನ್ ಸೆಂಟ್ರಿಪ್ಯೂಜ್ ಕಂಪನಿಗೆ ತಲುಪಿಸಲಾಗುತ್ತದೆ. ಟಿನ್‍ಗಳನ್ನು ಒಡೆದು ಅರವಣ ತೆಗೆಯಲಾಗುವುದು. ಬಳಿಕ ಅದನ್ನು ನಾಶಗೊಳಿಸಲಾಗುವುದು. 

                        ಸನ್ನಿಧಾನಂನಲ್ಲಿರುವ ದೊಡ್ಡ ಕಟ್ಟಡವು ಹಾನಿಗೊಳಗಾದ ಅರವಣವನ್ನು ಇರಿಸಿರುವುದರಿಂದ ಇತರ ಉದ್ದೇಶಗಳಿಗೆ ಬಳಸಲಾಗುವುದಿಲ್ಲ. ಇಲ್ಲಿ ಸಂಗ್ರಹವಾಗಿರುವ ಅರವಣ ಡಬ್ಬಗಳಿಂದ ಸಿಡಿದು ಬೆಲ್ಲದ ವಾಸನೆ ಬರುತ್ತಿದೆ. ಆನೆಗಳು ಎರಡು ಬಾರಿ ವಾಸನೆ ಆಧಾರದಲ್ಲಿ  ಆ ಕಟ್ಡದ ಬಳಿ ಬಂದಿದ್ದವು.

               ಏಲಕ್ಕಿಯಲ್ಲಿ ಕೀಟನಾಶಕ ಅಂಶವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 2023ರ ಜನವರಿಯಲ್ಲಿ 6.65 ಕೋಟಿ ಮೌಲ್ಯದ ಅರವಣವನ್ನು ಮಾರಾಟ ಮಾಡದಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ದೇವಸ್ವಂಬೋರ್ಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿದಾರರು ಕೀಟನಾಶಕ ಅಂಶವನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿದೆ. ಅಷ್ಟರಲ್ಲಾಗಲೇ ದಿನ ಕಳೆದಿದ್ದರಿಂದ ಹಳೆಯ ಅರವಣ ಬಳಸದಿರಲು ದೇವಸ್ವಂ ನಿರ್ಧರಿಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries