ಕಾಸರಗೋಡು: ನಗರ ಪ್ರದೇಶ ಕೇಂದ್ರೀಕರಿಸಿ ಭಾರಿ ಕಳವಿಗೆ ಸಂಚು ರೂಪಿಸಿದ್ದ ಕಾಸರಗೋಡು, ಕಣ್ಣೂರು ಹಾಗೂ ಭಟ್ಕಳ ನಿವಾಸಿಗಳಾದ ಹನ್ನೊಂದು ಮಂದಿಯನ್ನು ಕೊಯಂಬತ್ತೂರಿನಿಂದ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಸರಣಿಸ್ಪೋಟ ಪ್ರಕರಣದ ಆರೋಪಿ ಕಣ್ಣೂರು ತಡಿಯಂಡವೀಡ್ ನಸೀರ್‍ನ ಸಹೋದರ, ಕಣ್ಣೂರು ತಡಿಯಂಡವೀಡ್ ತಯ್ಯಿಲ್ ನಿವಾಸಿ ಎಂ. ಶಮಾಲ್, ಹೊಸದುರ್ಗದ ಮಹಮ್ಮದ್ ನಿಯಾಸುದ್ದೀನ್, ಸುನಿಲ್, ಸಮೀರ್, ತೃಕ್ಕರಿಪುರದ ಪರ್ಸಾದ್, ಅನಸ್, ಮಹಮ್ಮದ್ ಅನಸ್, ಸಲೀಂಮಲಿಕ್, ಶಾಜಹಾನ್, ಮಹಮ್ಮದ್ ಯಾಸಿನ್, ಭಟ್ಕಳ ನಿವಾಸಿ ನೌಫಲ್ ಮಾಸಿಂ ಶೇಖ್ ಬಂಧಿತರು. ಕೊಯಂಬತ್ತೂರಿನ ಕೊವ್ವೆ ಪುತುರಿಯದ ಮನೆಯೊಂದರಲ್ಲಿದೀ 11ಮಂದಿ ಠಿಕಾಣಿ ಹೂಡಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸಂಶಯಗೊಂಡು ಇವರನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸಿದಾಘ ಭಾರಿ ಕಳವಿಗೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿತ್ತು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂಬತ್ತು ಮಂದಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಘಿದ್ದು, ಇತರ ಇಬ್ಬರನ್ನು ಹೆಚ್ಚಿನ ತನಿಖೆಗಾಘಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.