ರಾಂಚಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮೂರು ದಿನಗಳ ವಾರ್ಷಿಕ ಸಭೆ ಶುಕ್ರವಾರ ಇಲ್ಲಿ ಆರಂಭವಾಗಲಿದ್ದು ಸಂಘಟನೆಯ ವಿಸ್ತರಣೆ ಮತ್ತು ಶತಮಾನೋತ್ಸವ ಆಚರಣೆ ಸೇರಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಎಲ್ಲ ಪ್ರಾಂತ್ಯ ಪ್ರಚಾರಕರು (ಪ್ರಾಂತ್ಯ ಉಸ್ತುವಾರಿಗಳು) ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್, 2025ರ ವಿಜಯದಶಮಿಯಂದು ಸಂಘವು 100 ವರ್ಷ ಪೂರೈಸಲಿದೆ. ಸಂಘಟನೆಯನ್ನು ದೇಶದಾದ್ಯಂತ ಮಂಡಲ ಮಟ್ಟಕ್ಕೆ (10ರಿಂದ15 ಹಳ್ಳಿಗಳ ಗುಂಪು) ವಿಸ್ತರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘವು ಪ್ರಸ್ತುತ 73,000 ಶಾಖೆಗಳನ್ನು ಹೊಂದಿದ್ದು, ಇದನ್ನು ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಮೂರು ದಿನಗಳ ಸಭೆಯಲ್ಲಿ, ಪ್ರಾಂತ್ಯದ ಉಸ್ತುವಾರಿಗಳು ಮುಂಬರುವ ವರ್ಷದಲ್ಲಿ ಕೈಗೊಳ್ಳಲಿರುವ ವಿವಿಧ ಸಾಂಸ್ಥಿಕ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆಯೂ ಚರ್ಚಿಸಲಿದ್ದಾರೆ. ಸಂಘದ ಶತಮಾನೋತ್ಸವದ ಬಗ್ಗೆಯೂ ಚರ್ಚೆ ನಡೆಯಲಿದೆ. ಎಂದರು.
ಪೂರ್ಣಕಾಲಿಕ ಆರ್‌ಎಸ್‌ಎಸ್ ಕಾರ್ಯಕರ್ತರಾದ ಪ್ರಾಂತ್ಯ ಪ್ರಚಾರಕರು, 46 ಪ್ರಾಂತ್ಯಗಳು ಅಥವಾ ಸಾಂಸ್ಥಿಕ ಪ್ರಾಂತ್ಯಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.