ನವದೆಹಲಿ: ಜಾರ್ಖಂಡ್‌ನ ರಾಂಚಿಯಲ್ಲಿ ಜುಲೈ 12ರಿಂದ 14ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಾಂತ್ಯ ಪ್ರಚಾರಕರ ಸಭೆ ನಡೆಯಲಿದ್ದು, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ.
ನವದೆಹಲಿ: ಜಾರ್ಖಂಡ್‌ನ ರಾಂಚಿಯಲ್ಲಿ ಜುಲೈ 12ರಿಂದ 14ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಾಂತ್ಯ ಪ್ರಚಾರಕರ ಸಭೆ ನಡೆಯಲಿದ್ದು, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ.
'ಮೇ-ಜೂನ್‌ನಲ್ಲಿ ನಡೆದ ಆರ್‌ಎಸ್‌ಎಸ್ ತರಬೇತಿ ಕಾರ್ಯಕ್ರಮದ ಕುರಿತು ಎಲ್ಲ ಪ್ರಾಂತೀಯ ಪ್ರಚಾರಕರು ವರದಿ ನೀಡಲಿದ್ದು, ಸಭೆಯಲ್ಲಿ ಪರಾಮರ್ಶೆ ನಡೆಸಲಾಗುತ್ತದೆ' ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು ಶುಕ್ರವಾರ ತಿಳಿಸಿದ್ದಾರೆ.
'ಮೋಹನ್ ಭಾಗವತ್ ಅವರು 2024-25ರಲ್ಲಿ ಕೈಗೊಳ್ಳುವ ಪ್ರವಾಸದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. 2025-26ರಲ್ಲಿ ನಡೆಯಲಿರುವ ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಂಭ್ರಮಾಚರಣೆಯ ಬಗ್ಗೆ ಯೋಜನೆ ರೂಪಿಸಲಾಗುವುದು' ಎಂದು ಹೇಳಿದರು.
ಆರ್‌ಎಸ್‌ಎಸ್ ಸಂಘಟನೆಯು ದೇಶದಲ್ಲಿ ಒಟ್ಟು 46 ಪ್ರಾಂತ್ಯಗಳನ್ನು ಹೊಂದಿದ್ದು, ಎಲ್ಲ ಪ್ರಾಂತ್ಯಗಳ ಪ್ರಚಾರಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.