ಬೆಂಗಳೂರು:ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಗಡಿ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜು.13ರಂದು ಕನ್ನಡ ಮತ್ತು ಸಂಸ್ಕೃತಿ ಉತ್ಸವ ಹಾಗೂ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಎಡನೀರು ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿಮರದ ಮತ್ತಿತತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕೆಯುಡಬ್ಲುಜೆ ಕಾಸರಗೋಡು ಜಿಲ್ಲಾ ಘಟಕ ನೀಡುವ 2024ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ ಸೇರಿದಂತೆ 14 ಮಂದಿ ದತ್ತಿ ನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್‌ಮತ್ತಿಹಳ್ಳಿ ಮಾತನಾಡಿ, ಗಡಿ ನಾಡಿನ ಸಂಸ್ಕೃತಿ ಉತ್ಸವದಲ್ಲಿ ಕನ್ನಡಿಗರು ಭಾಗವಹಿಸುವಂತೆ ಕರೆ ನೀಡಿದ್ದಲ್ಲದೆ, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಶಸ್ತಿಗೆ ಆಯ್ಕೆಯಾದವರ ವಿವರ:
ಬೃಹೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸ್ಮರಣಾರ್ಥ ಶ್ರೀ ಮಠವು ನೀಡುವ ದತ್ತಿನಿಧಿ ಪ್ರಶಸ್ತಿಗೆ ವಿಶ್ವೇಶ್ವರ ಭಟ್, ಹುಬ್ಬಳ್ಳೀ ಅವ್ವ್ವ ಸೇವಾ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿಗೆ ಚೇತನಾ ಬೆಳಗೆರೆ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ ಸೋಮಶೇಖರ ಪ್ರಶಸ್ತಿಗೆ ಅಶೋಕ ಚಂದರಗಿ, ಹವ್ವಾ ಹಸನ್ ಫೌಂಡೇಶನ್ ಕುದ್ಕೊಳಿ ಸಂಸ್ಥಾಪಕ ಅಬ್ದುಲ್ಲ ಮಾದುಮೂಲೆ ಪ್ರಶಸ್ತಿಗೆ ಬಿ.ರವೀಂದ್ರ ಶೆಟ್ಟಿ, ಅನಿವಾಸಿ ಉದ್ಯಮಿ ಕಲಾಪೋಷಕ ಜೋಸ್ೆ ಮಾಥಿಯಾಸ್ ಪ್ರಶಸ್ತಿಗೆ ಜಿ. ಸುಬ್ರಾಯ ಭಟ್ ಭಕ್ಕಳ, ಕೆವಿಆರ್ ಠ್ಯಾಗೋರ್ ಸ್ಮರಣಾರ್ಥ ಭಾಗ್ಯ ಠ್ಯಾಗೋರ್ ಪ್ರಶಸ್ತಿಗೆ ಇಬ್ರಾಹಿಂ ಅಡ್ಕಸ್ಥಳ, ಶತಾಯುಷಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೆಸರಿನ ದತ್ತಿನಿಧಿ ಪ್ರಶಸ್ತಿಗೆ ವಾಲ್ಟರ್ ನಂದಳಿಕೆ, ಮಕ್ಕಳ ತಜ್ಞ ಡಾ.ಸುಧಾಕರ ಶೆಟ್ಟಿ ಪುಣೆ ದತ್ತಿನಿಧಿ ಪ್ರಶಸ್ತಿಗೆ ಎಚ್.ಬಿ. ಮದನಗೌಡ, ಮುಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ನೀಡುವ ಪ್ರಶಸ್ತಿಗೆ ನವೀನ್ ಕೆ. ಇನ್ನ, ಮುಂಬೈ, ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಶ್ರೀ ಹರ್ಷ ಮೇಲಾಂಟ ನೀಡುವ ಪ್ರಶಸ್ತಿಗೆ ಡಾ. ನಂದ ಕುಮಾರ್ ಹೆಗ್ಡೆ, ಸಮಾಜ ಸೇವಕ ಅಶ್ರ್ ಶಾ ಮಂತೂರು ಪ್ರಶಸ್ತಿಗೆ ಅನಿಲ್ ಹೆಚ್.ಟಿ., ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ನವಮುಂಬಯಿ ಪ್ರಶಸ್ತಿಗೆ ಸದಾನಂದ ಜೋಶಿ, ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿಗಳಿಗೆ ದಿವಾಕರ ಬಿ. ಶೆಟ್ಟಿ ಮತ್ತು ಬಿ.ಪಿ ಶೇಣಿ ಆಯ್ಕೆಯಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಯುಡಬ್ಲುಜೆ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎಆರ್ ಸುಬ್ಬಯಕಟ್ಟೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಶಿವರೆಡ್ಡಿ ಖ್ಯಾಡೆದ್, ನ್ಯಾಯವಾದಿ ಥೋಮಸ್ ಡಿಸೋಜ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಝಡ್.ಎ.ಕಯ್ಯರ್, ಗಂಗಾಧರ ತೆಕ್ಕೆಮೂಲೆ, ಪುರುಷೋತಮ ಪೆರ್ಲ ಉಪಸ್ಥಿತರಿದ್ದರು.