HEALTH TIPS

ಎರಡು ಪ್ರತ್ಯೇಕ ಕಾರ್ಯಾಚರಣೆ-144ಲೀ ವಿದೇಶಿ ಮದ್ಯ ವಶ, ಒಬ್ಬನ ಬಂಧನ

               ಕುಂಬಳೆ:  ಬಂಬ್ರಾಣ ಮತ್ತು ಕಯ್ಯಾರಿನಲ್ಲಿ ಅಬಕಾರಿ ದಳ ಅಧಿಕಾರಿಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 144.9ಲೀ. ವಿದೇಶಿ ಮದ್ಯ ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. 

             ಬಂಬ್ರಾಣ ಸನಿಹದ ಕಟ್ಟತ್ತಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 129.6ಲೀ. ವಿದೇಶೀ ಮದ್ಯ ವಶಪಡಿಸಿಕೊಂಡು, ಮಂಜೇಶ್ವರ ಕುಳೂರು ಚಾರ್ಲ ನಿವಾಸಿ ಚಂದ್ರಶೇಖರ ಎಂಬಾತನನ್ನು ಬಂಧಿಸಿದ್ದಾರೆ. ಮದ್ಯಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕುಂಬಳೆ ರೇಂಜ್ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಲ್ಪಾಡಿ ಪಂಚಾಯಿತಿ ಕಯ್ಯಾರಿನ ಹಿತ್ತಿಲೊಂದರಲ್ಲಿ ಅವಿತಿರಿಸಲಾಗಿದ್ದ 15.3ಲೀ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪತ್ತೆ ಸಾಧ್ಯವಾಗಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries