ಬದಿಯಡ್ಕ: ಯಕ್ಷಗಾನದ ಗುರು, ಧಾರ್ಮಿಕ, ಸಾಮಾಜಿಕ ಜಾನಪದ ರಂಗದ ಸಾಧಕ ಜಯರಾಮ ಪಾಟಾಳಿ ಪಡುಮಲೆ ಇವರ ಸಾರ್ಥಕ ಬದುಕಿನ 50 ವರ್ಷದ ಸಂದರ್ಭದಲ್ಲಿ `ಜಯರಾಮ ಸುವರ್ಣ ಸಂಭ್ರಮ' ಕಾರ್ಯಕ್ರಮ ಅಕ್ಟೋಬರ್ ತಿಂಗಳಿನಲ್ಲಿ ಜರಗಲಿರುವುದು. ಅಭಿನಂದನಾ ಸಮಿತಿಯ ರೂಪೀಕರಣದ ಕುರಿತು ಸಮಾಲೋಚನಾ ಸಭೆ ಜು.14 ರಂದು ಭಾನುವಾರ ಮಧ್ಯಾಹ್ನ 2 ರಿಂದ ಬದಿಯಡ್ಕ ಶ್ರೀಗುರುಸದನದಲ್ಲಿ ಜರಗಲಿರುವುದು. ಇದೇ ಸಂದಭರ್Àದಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಇನ್ನಿತರ ವಿಚಾರಗಳನ್ನು ಚರ್ಚಿಸಲಾಗುವುದು.
ಯಕ್ಷಗಾನ ರಂಗದಲ್ಲಿ ಸಾಧನೆಗೈದಿರುವ ಜಯರಾಮ ಪಾಟಾಳಿ ಪಡುಮಲೆ ಅವರು ನಾಡಿನಾದ್ಯಂತ ಅನೇಕ ಶಿಷ್ಯಂದಿರನ್ನು, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಲೋಚನಾ ಸಭೆಯಲ್ಲಿ ಅವರ ಹಿತೈಷಿಗಳು, ಶಿಷ್ಯಂದಿರು, ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಜಯರಾಮ ಸುವರ್ಣ ಸಂಭ್ರಮ ಕಾರ್ಯಕ್ರಮದ ಯಶಸ್ವಿಗಾಗಿ ಕೈಜೋಡಿಸಬೇಕೆಂದು ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.