HEALTH TIPS

ಹಾಥರಸ್ ಕಾಲ್ತುಳಿತ: ಪ್ರಮುಖ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

         ನೊಯ್ಡಾ: 121 ಮಂದಿಯ ಸಾವಿಗೆ ಕಾರಣವಾದ ಹಾಥರಸ್‌ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್‌ ಮಧುಕರ್‌ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

         ಈತನನ್ನು ಹಾಥರಸ್‌ ಪೊಲೀಸ್‌ನ ವಿಶೇಷ ಕಾರ್ಯಚರಣೆ ಪಡೆಯು ದೆಹಲಿಯ ನಜಾಫಗಡ ಪ್ರದೇಶದಿಂದ ಬಂಧಿಸಿತ್ತು. ಶುಕ್ರವಾರ ತಡರಾತ್ರಿ ಆತನ ಬಂಧನವಾಗಿತ್ತು.

          'ಸ್ವಘೋಷಿತ ದೇವಮಾನವ ಸೂರಜ್‌‍ಪಾಲ್ ಅಲಿಯಾಸ್‌ ನಾರಾಯಣ ಸಕರ್‌ ಹರಿ ಅಲಿಯಾಸ್‌ ಭೋಲೆ ಬಾಬಾ ಅವರ ಕಾರ್ಯಕ್ರಮದಲ್ಲಿ ದೇವ‍ಪ್ರಕಾಶ ನಿಧಿಸಂಗ್ರಹಗಾರನಾಗಿ ಕೆಲಸ ಮಾಡುತ್ತಿದ್ದ. ಆತನನ್ನು ಕಸ್ಟಡಿಗೆ ಪಡೆಯಲು ಮನವಿ ಮಾಡಲಾಗುವುದು' ಎಂದು ಪೊಲೀಸ್‌ ವರಿಷ್ಠಾಧಿಕಾರಿ ನಿಪುನ್ ಅಗರ್‌ವಾಲ್ ಹೇಳಿದ್ದಾರೆ.

          'ಆತನ ಹಣಕಾಸಿನ ವ್ಯವಹಾರಗಳು ಹಾಗೂ ಕರೆ ದಾಖಲೆಗಳನ್ನು ತನಿಖೆ ನಡೆಸಲಾಗುವುದು' ಎಂದು ಅವರು ಹೇಳಿದ್ದಾರೆ.

              ಶುಕ್ರವಾರ ರಾತ್ರಿ ಮಧುಕರ್‌ ಶರಣಾಗಿದ್ದಾನೆ ಎಂದು ಅತನ ವಕೀಲರಾದ ಎ.ಪಿ ಸಿಂಗ್‌ ಹೇಳಿದ್ದರು.

          ಶನಿವಾರ ಮಧ್ಯಾಹ್ನ ಸುಮಾರು 2.15ರ ವೇಳೆಗೆ ಬಾಗ್ಲಾದಲ್ಲಿರುವ ಹಾಥರಸ್‌ ಜಿಲ್ಲಾ ಆಸ್ಪತ್ರೆಗೆ ಮಧುಕರ್‌ನನ್ನು ಕರೆತರಲಾಯಿತು. ಆಸ್ಪತ್ರೆಯ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಇತ್ತು.

ಘಟನೆ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ದೇವಪ್ರಕಾಶ ಮುಖ್ಯಸೇವಾದಾರನಾಗಿದ್ದ. ಘಟನೆ ಸಂಬಂಧ ಸಿಂಕದರ್‌ ರಾವ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ದಾಖಲಾಗಿದ್ದ ಏಕಮಾತ್ರ ಹೆಸರು ಈತನದ್ದು ಮಾತ್ರ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries