ಶಿಮ್ಲಾ: ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕಾಂಗ್ರಾದ ಧರ್ಮಶಾಲಾ ಹಾಗೂ ಪಾಲಂಪುರದಲ್ಲಿ 20 ಸೆಂ.ಮೀ.ಗೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ.
ಧಾರಾಕಾರ ಮಳೆಯಿಂದಾಗಿ ಮಂಡಿಯಲ್ಲಿ 11, ಸಿರ್‌ಮೌರ್‌ನಲ್ಲಿ 13, ಶಿಮ್ಲಾದಲ್ಲಿ 9, ಚಂಬಾ ಹಾಗೂ ಕುಲ್ಲುವಿನಲ್ಲಿ ತಲಾ 8, ಕಾಂಗ್ರಾ ಜಿಲ್ಲೆಯಲ್ಲಿ 1 ಸೇರಿ ಒಟ್ಟು 150 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ಮಾಹಿತಿ ನೀಡಿದೆ.
334 ಟ್ರಾನ್ಸ್‌ಫರ್ಮರ್‌ಗಳು ಹಾಳಾಗಿದ್ದು, ನೀರು ಸರಬರಾಜು ಮಾಡುವ 55 ಯೋಜನೆಗಳು ಸ್ಥಗಿತಗೊಂಡಿವೆ.
ಕಾಂಗ್ರಾ ಜಿಲ್ಲೆಯ ಧರ್ಮಶಾಲದಲ್ಲಿ 21. 46 ಸೆಂ.ಮೀ., ಪಾಲಂಪುರದಲ್ಲಿ 21.24 ಸೆಂ.ಮೀ., ಜೋಂಗಿದರ್ ನಗರದಲ್ಲಿ 16.9 ಸೆಂ.ಮೀ., ಕಾಂಗ್ರಾ ನಗರದಲ್ಲಿ 15.76 ಸೆಂ.ಮೀ., ಬೈಜ್‌ನಾಥ್‌ನಲ್ಲಿ 14.2 ಸೆಂ.ಮೀ., ಜೊಟ್‌ನಲ್ಲಿ 9.52 ಸೆಂ.ಮೀ., ನಗೊರ್ತ ಸುರಿಯಾನ್ 9.02 ಸೆಂ.ಮೀ., ಸುಜನ್‌ಪುರ ತಿರ 7.2 ಸೆಂ.ಮೀ., ಧೌಲಕುವಾನ್‌ನಲ್ಲಿ 7.ಸೆಂ.ಮೀ., ಘಮರೂರ್‌ನಲ್ಲಿ 6.82 ಸೆಂ.ಮೀ., ನಾದೌನ್‌ನಲ್ಲಿ 6. 3 ಸೆಂ.ಮೀ. ಮತ್ತು ಬರ್ಥಿನ್‌ನಲ್ಲಿ 5.88 ಸೆಂ.ಮೀ. ಮಳೆಯಾಗಿದೆ.
ಶಿಮ್ಲಾ ಹವಾಮಾನ ಇಲಾಖೆಯು ಜುಲೈ 12ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಸಿಡಿಲು, ಮಿಂಚಿನ ಮುನ್ನೆಚ್ಚರಿಕೆಯನ್ನೂ ನೀಡಿದೆ.