ಕಾಸರಗೋಡು: ರಾಜ್ಯ ಹಗ್ಗಜಗ್ಗಾಟ ಅಸೋಸಿಯೇಶನ್ ಆಯೋಜಿಸಿದ್ದ ರಾಜ್ಯ ಹಗ್ಗಜಗ್ಗಾಟ ಚಾಂಪಿಯನ್‍ಷಿಪ್ ನಲ್ಲಿ 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಜಿಲ್ಲೆಗೆ 3ನೇ ಸ್ಥಾನಲಭಿಸಿದೆ. ಎರ್ನಾಕುಲಂನಲ್ಲಿ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿತ್ತು.
ಬಾನಂ ಸರ್ಕಾರಿ ಪ್ರೌಢಶಾಲೆಯ ಅನಾಮಿಕಾ ಹರೀಶ್ (ಕ್ಯಾಪ್ಟನ್), ಟಿ.ವಿ.ಅಂಜಿತಾ, ವಿ.ಶಿವಾತ್ಮಜ, ಪಿ.ಸೌಭಾಗ್ಯ, ಪಿ.ಅಂಕಿತ, ಎಂ.ಎ.ಅನಘಾ, ಸಿ.ಪ್ರವೀಣ, ಕೆ.ಕೆ.ಶಿವದಾ, ಕುಂಡಂಗುಯಿ ಸರ್ಕಾರಿ ಪ್ರೌಢಶಾಲೆಯ ಉತ್ತರಾ ಎ.ಎಸ್ ಮತ್ತು ಶ್ರೀನಂದ ಎನ್.ಕೆ ತಂಡದ ಸದಸ್ಯರಾಗಿದ್ದಾರೆ. ಅನಾಮಿಕಾ ಅವರು ಕಳೆದ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ಮಣಿ ಮುಂಡತ್ ತಂಡದ ಕೋಚ್ ಆಗಿ ಸಹಕರಿಸಿದ್ದಾರೆ.