ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಜಾರಿಗೊಂಡ ದಿನದಿಂದ ಇಲ್ಲಿಯವರೆಗೆ ರೈತರಿಗೆ ₹1.63 ಲಕ್ಷ ಕೋಟಿ ಬೆಳೆ ವಿಮೆ ಪರಿಹಾರ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ.
ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಜಾರಿಗೊಂಡ ದಿನದಿಂದ ಇಲ್ಲಿಯವರೆಗೆ ರೈತರಿಗೆ ₹1.63 ಲಕ್ಷ ಕೋಟಿ ಬೆಳೆ ವಿಮೆ ಪರಿಹಾರ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ.
2016ರಲ್ಲಿ ಮುಂಗಾರು ಋತುವಿಗೆ ಈ ಯೋಜನೆ ಜಾರಿಗೊಂಡಿತು. ರೈತರು ಒಟ್ಟು ₹32,440 ಕೋಟಿ ಪ್ರೀಮಿಯಂ ಪಾವತಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಪರಿಹಾರ ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪದ ವೇಳೆ ರೈತರಿಗೆ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟ ತಪ್ಪಿಸಲು ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕಡಿಮೆ ಪ್ರೀಮಿಯಂ ಮೂಲಕ ಬೆಳೆ ವಿಮೆ ಒದಗಿಸಲಾಗುತ್ತದೆ. ಯೋಜನೆಯ ನಿರೀಕ್ಷಿತ ಉದ್ದೇಶ ಈಡೇರಿಸಿದೆ' ಎಂದು ತಿಳಿಸಿದ್ದಾರೆ.
'2022-23ರಲ್ಲಿ 3.17 ಕೋಟಿ ರೈತರು ಹೆಸರು ನೋಂದಾಯಿಸಿದ್ದರು. 501 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶವು ಬೆಳೆ ವಿಮೆ ಸೌಲಭ್ಯಕ್ಕೆ ಒಳಪಟ್ಟಿತ್ತು. 2023-24ರಲ್ಲಿ 3.97 ಕೋಟಿ ರೈತರು ಹೆಸರು ನೋಂದಾಯಿಸಿದ್ದು, 598 ಲಕ್ಷ ಹೆಕ್ಟೇರ್ ಪ್ರದೇಶವು ಬೆಳೆ ವಿಮೆಗೆ ಒಳಪಟ್ಟಿತ್ತು' ಎಂದು ವಿವರಿಸಿದ್ದಾರೆ.