ಬದಿಯಡ್ಕ: ಅಬಕಾರಿ ಬದಿಯಡ್ಕ ರೇಂಜ್ ಅಧಿಕಾರಿಗಳು ಬದಿಯಡ್ಕ ಸನಿಹದ ಮೂಕಂಪಾರೆ, ಚೆನ್ನಾರಕಟ್ಟೆ ಪ್ರದೇಶದಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 92ಟೆಟ್ರಾ ಪ್ಯಾಕೆಟ್‍ನಲ್ಲಿ ಸಂಗ್ರಹಿಸಿಡಲಾಗಿದ್ದ 16.560ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ನೀರ್ಚಾಲು ಕಿನ್ನಿಮಾಣಿ ನಿವಾಸಿ ಮನು ಪಿ.ಎಸ್ ಹಾಗೂ ಕಳಯತ್ತೋಡಿ ನಿವಾಸಿ ಹೇಮಚಂದ್ರ ಬಂಧಿತರು.
ಮೂಕಂಪಾರೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 60ಟೆಟ್ರಾ ಪ್ಯಾಕೆಟ್‍ನೊಂದಿಗೆ ಮನು ಪಿ.ಎಸ್ ಹಾಗೂ ಚೆನ್ನಾರಕಟ್ಟೆಯಲ್ಲಿ 32 ಪ್ಯಾಕಟ್‍ಗಳೊಂದಿಗೆ ಹೇಮಚಂದ್ರನನ್ನು ಬಂಧಿಸಲಾಗಿದೆ. ಬದಿಯಡ್ಕ ರೇಂಜ್ ಪ್ರಿವೆಂಟಿವ್ ಅಧಿಕಾರಿ ಮಂಜುನಾಥ ಆಳ್ವ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.