ಕಾಸರಗೋಡು : ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಪ್ರಯೋಗಾಲಯ ತಂತ್ರಜ್ಞ ಗ್ರೇಡ್ 2 (ಪ್ರವರ್ಗ ಸಂಖ್ಯೆ: 714/2022) ಹುದ್ದೆಯ ಅರ್ಹ ಅಭ್ಯರ್ಥಿಗಳ ಕಿರುಪಟ್ಟಿಯಲ್ಲಿದ್ದು ಪರಿಶೀಲನೆಯನ್ನು ಪೂರ್ಣಗೊಳಿಸಿರುವ ಯೋಗ್ಯರಾದ ಉದ್ಯೋಗರ್ಥಿಗಳಿಗೆ ಜುಲೈ 17, 18 ಮತ್ತು 19 ರಂದು ಕೇರಳ ಲೋಕಸೇವಾ ಆಯೋಗದ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಸಂದರ್ಶನದ ಮೆಮೊ ಈಗಾಗಲೇ ಅಭ್ಯರ್ಥಿಯ ಪೆÇ್ರಫೈಲ್‍ನಲ್ಲಿ ಲಭ್ಯವಿದ್ದು, ಡೌನ್‍ಲೋಡ್ ಮಾಡಿದ ಸಂದರ್ಶನದ ಮೆಮೊ, ಒಂದು ಬಾರಿ ಪರಿಶೋಧನೆಯ ಪ್ರಮಾಣಪತ್ರ ಮತ್ತು ಮೂಲ ಪ್ರಮಾಣಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಲೋಕ ಸೇವಾ ಆಯೋಗದ ಜಿಲ್ಲಾ ಅಧಿಕಾರಿ ಪ್ರಕಟಣೆ ತಿಳಿಸಿದೆ.