ಚೆನ್ನೈ: ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಸೇನೆಯು ರಜೆಯಲ್ಲಿರುವ ಅಧಿಕಾರಿಗಳಿಗೆ ಸೂಚಿಸಿದೆ.
ಜಂಟಿ ಪಡೆಗಳು ಇದುವರೆಗೆ ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ ಎಂದು ಸೇನೆ ತಿಳಿಸಿದೆ. ಸುಮಾರು 70 ಮೃತದೇಹಗಳು ಪತ್ತೆಯಾಗಿವೆ ಎಂದು ಸೇನೆ ತಿಳಿಸಿದೆ.
ತಿರುವನಂತಪುರದಿAದ ಎರಡು ಸೇನಾ ತಂಡಗಳು ರಾತ್ರಿ ಕೋಝಿಕ್ಕೋಡ್ ತಲುಪಿದ್ದವು. ಮದ್ರಾಸ್ ಇಂಜಿನಿಯರಿAಗ್ ಟಾಸ್ಕ್ ಪೋರ್ಸ್ ಎರಡು ಗಂಟೆಗೆ ಸ್ಥಳಕ್ಕೆ ತಲುಪಿತು. ಚುರಲ್ಮಲಾದಲ್ಲಿ 170 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಲಾಗುವುದು ಎಂದು ಸೇನೆ ಹೇಳಿದೆ. ಜೆಸಿಬಿ, ಟ್ರಕ್‌ಗಳು ಸೇರಿದಂತೆ ಸಾಮಗ್ರಿಗಳು ಮಧ್ಯಾಹ್ನ 2 ಗಂಟೆಗೆ ವಯನಾಡ್‌ಗೆ ತಲುಪಲಿವೆ ಎಂದು ಸೇನೆ ತಿಳಿಸಿದೆ.
ರಕ್ಷಕರು ಮಂಗಳವಾರ ಸ್ಥಳಕ್ಕೆ ತಲುಪಲು ಸೀಮಿತರಾಗಿದ್ದರು. ಕೆಲವೇ ಜನರು ಹಗ್ಗದ ಮೂಲಕ ಸ್ಥಳಕ್ಕೆ ತಲುಪಬಹುದಿತ್ತು. ನಿನ್ನೆ ಮೊದಲ ಆದ್ಯತೆ ಮನೆಯೊಳಗೆ ಸಿಕ್ಕಿಬಿದ್ದವರು ಮತ್ತು ಗಾಯಾಳುಗಳನ್ನು ಹೊರತರುವುದಾಗಿತ್ತು. ಕುಸಿದು ಬಿದ್ದ ಮನೆಯೊಳಗೆ ಮೃತದೇಹಗಳು ಸಿಲುಕಿದ್ದರೂ ಹೊರ ತೆಗೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ತರುವಾಯ ಅನೇಕ ದೇಹಗಳನ್ನು ಬಿಟ್ಟು ಹಿಂತಿರುಗಬೇಕಾಯಿತು. ಬುಧವಾರ ಈ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.