ಜಮ್ಮು: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇಗುಲಕ್ಕೆ 1,700ಕ್ಕೂ ಹೆಚ್ಚು ಯಾತ್ರಿಗಳನ್ನು ಒಳಗೊಂಡ 30ನೇ ತಂಡ ಇಲ್ಲಿನ ಮೂಲ ಶಿಬಿರದಿಂದ ಶನಿವಾರ ಮುಂಜಾನೆ ಪ್ರಯಾಣ ಬೆಳೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇಗುಲಕ್ಕೆ 1,700ಕ್ಕೂ ಹೆಚ್ಚು ಯಾತ್ರಿಗಳನ್ನು ಒಳಗೊಂಡ 30ನೇ ತಂಡ ಇಲ್ಲಿನ ಮೂಲ ಶಿಬಿರದಿಂದ ಶನಿವಾರ ಮುಂಜಾನೆ ಪ್ರಯಾಣ ಬೆಳೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3,880 ಮೀಟರ್ ಎತ್ತರದ ಪವಿತ್ರ ಗುಹೆ ಗುಹಾ ದೇಗುಲಗಕ್ಕೆ ಈ ವರ್ಷ ಇದುವರೆಗೆ 4.45 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪೂಜೆ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
999 ಯಾತ್ರಾರ್ಥಿಗಳು ಸಾಂಪ್ರದಾಯಿಕ 48 ಕಿ.ಮೀ. ಉದ್ದದ ಪಹಲ್ಗಾಮ್ ಮಾರ್ಗದಲ್ಲಿ ತೆರಳಿದರೆ, 772 ಯಾತ್ರಿಕರು 14 ಕಿ.ಮೀ. ಕಡಿದಾದ ಬಾಲ್ಟಾಲ್ ಮಾರ್ಗವನ್ನು ಆಯ್ದುಕೊಂಡಿದ್ದಾರೆ.
ಜೂನ್ 29ರಂದು ಆರಂಭಗೊಂಡಿರುವ ಅಮರನಾಥ ಯಾತ್ರೆ ಆಗಸ್ಟ್ 19ರಂದು ಮುಕ್ತಾಯಗೊಳ್ಳಲಿದೆ.