ಗುರುವಾಯೂರು: ಕೇರಳ ಬ್ಯಾಂಕ್‍ನಲ್ಲಿ ಗುರುವಾಯೂರು ದೇವಸ್ವಂನ 176 ಕೋಟಿ ಸ್ಥಿರ ಠೇವಣಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನು ಪ್ರಮುಖ ಮಾಧ್ಯಮವೊಂದು ಬಹಿರಂಗಪಡಿಸಿದೆ.
ಅಂಕಿ ಅಂಶಗಳ ಪ್ರಕಾರ, ಗುರುವಾಯೂರು ದೇವಸ್ವಂ 271 ಎಕರೆ ಭೂಮಿ ಮತ್ತು 2053 ಕೋಟಿ ಸ್ಥಿರ ಹೂಡಿಕೆಯನ್ನು ಹೊಂದಿದೆ. ಸುಮಾರು 124 ಕೆಜಿ ಚಿನ್ನ ಕೂಡ ಇದೆ.
ಭಕ್ತರು ನೀಡಿದ 124 ಕೆಜಿ ಚಿನ್ನವಲ್ಲದೆ, ಕಲ್ಲುಗಳಿಂದ ಹೊದಿಸಿದ ಇನ್ನೂ 72 ಕೆಜಿ ಚಿನ್ನವಿದೆ. 6073 ಕೆಜಿ ಬೆಳ್ಳಿಯೂ ಇದೆ.
ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲದೆ, ಕೇರಳ ಬ್ಯಾಂಕ್ ನಲ್ಲೂ ಕೂಡ ಠೇವಣಿಗಳನ್ನು ಹೊಂದಿದೆ. ಕೇರಳ ಬ್ಯಾಂಕ್‍ನಲ್ಲಿ 176 ಕೋಟಿ ಠೇವಣಿ ಇಡಲಾಗಿದೆ. ಆದರೆ ಗುರುವಾಯೂರು ದೇವಸ್ವಂ ಆಗಲಿ, ಸರ್ಕಾರವಾಗಲಿ ದೇವಸ್ವಂ ಭೂಮಿಯ ಮೌಲ್ಯವನ್ನು ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಲೆಕ್ಕ ಹಾಕಿಲ್ಲ. ಕೈವಶವಿರುವ ಚಿನ್ನ ಬೆಳ್ಳಿಯ ಮೌಲ್ಯವನ್ನೂ ಲೆಕ್ಕ ಹಾಕಿಲ್ಲ.