ಕಾಸರಗೋಡು: ಆರ್ಥಿಕ ಸಾಂಖ್ಯಿಕ ಇಲಾಖೆ, ಕಾಸರಗೋಡು ಜಿಲ್ಲಾ ಕಛೇರಿ ಹಾಗೂ ಕಾಸರಗೋಡು ತಾಲೂಕು ಸಾಂಖ್ಯಿಕ ಕಛೇರಿಯ ಸಂಯುಕ್ತ ಆಶ್ರಯದಲ್ಲಿ 18ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಕಾಸರಗೋಡು ತಾಲೂಕು ಸಾಂಖ್ಯಿಕ ಕಛೇರಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು.
ಕಾಸರಗೋಡು ಜಿಲ್ಲಾ ಕೈಗಾರಿಕಾ ಇಲಾಖೆ ವ್ಯವಸ್ಥಾಪಕಿ ಆರ್. ರೇಖಾ ಸಮಾರಂಭ ಉದ್ಘಾಟಿಸಿದರು. ಡಾಟಗಳ ಪ್ರಾಧಾನ್ಯತೆ ಬಗ್ಗೆ ಹಾಗೂ ಪಿ.ಸಿ ಮಹಲನೋಬಿಸ್ ಸಂಸ್ಮರಣಾ ಉಪನ್ಯಾಸ ಕಾಯ್ಕ್ರಮ ಜರುಗಿತು. ಸಂಶೋಧನಾ ಅಧಿಕಾರಿ ಎಂ.ಶಾಜಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ತಾಲೂಕು ಸಾಂಖ್ಯಿಕ ಕಚೇರಿಯ ಸಾಂಖ್ಯಿಕ ನಿರೀಕ್ಷಕ ಉಣ್ಣಿಕೃಷ್ಣನ್ ಮತ್ತು ಸಾಂಖ್ಯಿಕ ನಿರೀಕ್ಷಕ ಪಿ.ವಿ.ಸುಕುಮಾರನ್ ಉಪಸ್ಥಿತರಿದ್ದರು. 'ತೀರ್ಮಾನ ಕೈಗೊಳ್ಳುವಲ್ಲಿ ಡಾಟಾಗಳ ಪಾತ್ರ' ಎಂಬ ವಿಷಯದಲ್ಲಿ ಸಾಂಖ್ಯಿಕ ತನಿಖಾಧಿಕಾರಿಗಳಾದ ಪಿ.ಗೋಪಕುಮಾರ್ ಮತ್ತು ಟಿ. ಫಿಲಿಪ್ ತರಗತಿ ನಡೆಸಿದರು. ಸಂಶೋಧನಾ ಅಧಿಕಾರಿ ಎಂ.ಶಾಜಿ ನೇತೃತ್ವದಲ್ಲಿ ಸಂಖ್ಯಾಶಾಸ್ತ್ರ ವಿಷಯ ಆಧರಿಸಿ ಇಲಾಖೆಯ ನೌಕರರಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಸರಗೋಡು ತಾಲೂಕು ಸಾಂಖ್ಯಿಕ ಅಧಿಕಾರಿ ಟಿ.ಕೆ.ಶಾಜಿ ಸ್ವಾಗತಿಸಿದರು.