HEALTH TIPS

ನೇಪಾಳದಲ್ಲಿ ವಿಮಾನ ಪತನ: 18 ಸಾವು; ಪೈಲಟ್‌ಗಳಿಗೆ ‌ತರಬೇತಿ ಕೊರತೆ

 ಠ್ಮಂಡು: ಇಲ್ಲಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಖರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ವಿಮಾನವೊಂದು ಬುಧವಾರ ಪತನಗೊಂಡಿದೆ. ವಿಮಾನದಲ್ಲಿದ್ದ 19 ಮಂದಿಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ವಿಮಾನದ ಪೈಲಟ್‌ ಮಾತ್ರವೇ ಬದುಕುಳಿದಿದ್ದು, ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಟೇಕ್‌ ಆಫ್‌ ಆಗುತ್ತಿದ್ದಂತೆಯೇ ವಿಮಾನವು ಪತನಗೊಂಡಿದೆ. ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಬಲಕ್ಕೆ ವಾಲಿದೆ ಮತ್ತು ರನ್‌ವೇಗೆ ಅಪ್ಪಳಿಸಿದೆ. ಬೆಳಿಗ್ಗೆ ಸುಮಾರು 11.11 ಗಂಟೆಗೆ ಈ ಅವಘಡ ಸಂಭವಿಸಿದ್ದು, 15 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೂವರು ಮೃತಪಟ್ಟಿದ್ದಾರೆ. ನೇಪಾಳದ ದೇಶೀಯ ವಿಮಾನಯಾನ ಸಂಸ್ಥೆ ಸೂರ್ಯ ಏರ್‌ಲೈನ್ಸ್‌ನ ವಿಮಾನ ಇದಾಗಿದೆ.

'ಯಾಕಾಗಿ ವಿಮಾನವು ಪತನಗೊಂಡಿತು ಎನ್ನುವುದು ತಿಳಿದುಬಂದಿಲ್ಲ' ಎಂದು ತ್ರಿಭುವನ್‌ ವಿಮಾನ ನಿಲ್ದಾಣದ ಮುಖ್ಯಸ್ಥ ಜಗನ್ನಾಥ ನಿರೌಲಾ ಮಾಹಿತಿ ನೀಡಿದ್ದಾರೆ. 'ವಿಮಾನವು ಪತನಗೊಂಡಿದ್ದನ್ನು ನಮಗೆ ಟ್ರ್ಯಾಕ್‌ ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ವಿಮಾನದಲ್ಲಿ ಅತ್ಯಾಧುನಿಕವಾದ ಎಡಿಎಸ್‌-ಬಿ ಟ್ರಾನ್ಸ್‌ಸ್ಪಾಂಡರ್‌ ಅಳವಡಿಸಿರಲಿಲ್ಲ' ಎಂದು ಫೈಟ್‌ಟ್ರೇಡರ್‌ 24 ಸಂಸ್ಥೆ ಹೇಳಿದೆ. ಟ್ರಾನ್ಸ್‌ಸ್ಪಾಂಡರ್‌ ಎಂದರೆ, ವಿಮಾನ ಹಾರಾಟದ ವೇಳೆ ವಿಮಾನವು ಎಲ್ಲಿದೆ ಎನ್ನುವುದನ್ನು ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ ರೇಡಿಯೊ ತರಂಗಾಂತರಗಳ ಮೂಲಕ ತಿಳಿಸುವ ಯಂತ್ರವಾಗಿದೆ.

ರನ್‌ವೇಗೆ ಬಂದು ಅಪ್ಪಳಿಸುತ್ತಿದ್ದಂತೆಯೇ ವಿಮಾನವು ಹೊತ್ತಿ ಉರಿದಿದೆ. ರನ್‌ವೇನಲ್ಲಿಯೇ ಇದ್ದ ಕೆಲವು ಸಿಬ್ಬಂದಿ ರಕ್ಷಣೆಗೆ ಧಾವಿಸಿದರಾದರೂ ಬೆಂಕಿಯ ತಾಪ ಅವರನ್ನು ಹಿಂದಕ್ಕೆ ಸರಿಯುವಂತೆ ಮಾಡಿತು. ನಂತರ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ನೇಪಾಳ ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಪತನಗೊಂಡ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಸಂಬಂಧ ಕೆಲಕಾಲ ತ್ರಿಭುವನ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ವಿಮಾನ ಹಾರಾಟವು ಪುನರಾರಂಭಗೊಂಡಿದೆ.

ಕೆನಡಾದ ಬೊಂಬಾರ್ಡಿಯರ್‌ ಎನ್ನುವ ಸಂಸ್ಥೆ 'ಬೊಂಬಾರ್ಡಿಯರ್‌ ಸಿಆರ್‌ಜೆ-200' ವಿಮಾನವನ್ನು ನಿರ್ಮಿಸಿದೆ. ಈ ವಿಮಾನವನ್ನು ಸೂರ್ಯ ಏರ್‌ಲೈನ್ಸ್ ಖರೀದಿಸಿದೆ. ಇದೇ ವಿಮಾನವೇ ಈಗ ಪತನಗೊಂಡಿರುವುದು. ಇದೇ ಮಾದರಿಯ ವಿಮಾನವು ಸೂರ್ಯ ಸಂಸ್ಥೆಯ ಬಳಿ ಇನ್ನೊಂದು ಇದೆ. ಈಗ ಕೆನಡಾ ಸಂಸ್ಥೆಯ ಬಗೆಗೆ ಹಲವು ಪ್ರಶ್ನೆಗಳು ಮೂಡುತ್ತಿವೆ. ಸಂಸ್ಥೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries