HEALTH TIPS

ಕಾರ್ಯನಿರ್ವಹಣೆ ಪುನರಾರಂಭಿಸಿದ ಕೇರಳದ ಮೊದಲ ಲಿಫ್ಟ್! ಮರದಿಂದಲೇ ರಚನೆಗೊಂಡ ಗ್ರಿಲ್ ಮತ್ತು ಮೊಳೆ: 1940 ರಲ್ಲಿ ಇಟಲಿಯಿಂದ ಆಮದು ಮಾಡಿಕೊಂಡ ಲಿಪ್ಟ್

                  ತಿರುವನಂತಪುರಂ: ಕೇರಳದ ಮೊದಲ ಲಿಫ್ಟ್ ಮತ್ತೆ ಕಾರ್ಯಾರಂಭ ಮಾಡಿದೆ. ಕವಡಿಯಾರ್ ಅರಮನೆಯಲ್ಲಿ ಹಲವು ವರ್ಷಗಳ ನಂತರ ಲಿಪ್ಟ್ ಮತ್ತೆ ನಿರ್ವಹಣೆ ಆರಂಭಿಸಿದೆ.

               ಶ್ರೀಚಿತ್ತಿರ ತಿರುನಾಳ್ ಮಹಾರಾಜರ ಕಾಲದಲ್ಲಿ 1940ರಲ್ಲಿ ಇಟಲಿಯಿಂದ ಲಿಫ್ಟ್ ತರಲಾಗಿತ್ತು. ಅರಮನೆಯ ವಿದ್ಯುತ್ ವ್ಯವಸ್ಥೆಯಲ್ಲಿನ ದೋಷದಿಂದ ಕೆಲವು ವರ್ಷಗಳಿಂದ ಅದು ಕಾರ್ಯನಿರ್ವಹಿಸುತ್ತಿರÀಲಿಲ್ಲ.

               ವಿದ್ಯುತ್ ಸಂಪರ್ಕವೂ ಅಪರೂಪವಾಗಿದ್ದ ಕಾಲದಲ್ಲಿ ಅರಮನೆಯಲ್ಲಿ ಲಿಫ್ಟ್ ಅಳವಡಿಸಲಾಗಿತ್ತು. ಲಿಫ್ಟ್ ತಯಾರಕರಾದ ಸ್ಟಿಂಗರ್ ಕಂಪನಿಯ ಮಾರ್ಗದರ್ಶನದಲ್ಲಿ ತಿರುವಾಂಕೂರು ದುರಸ್ತಿ ಇಲಾಖೆ ಇದನ್ನು ಸ್ಥಾಪಿಸಿತ್ತು. ಬಲರಾಮಪುರಂ ಭಗವತಿನಾಡ ಮೂಲದ ತಂಕಪ್ಪನ ಆಚಾರಿ ನೇತೃತ್ವದಲ್ಲಿ ಕಾರ್ಯಗಳು ನಡೆದಿದ್ದವು. ಅವರು ಹೆಚ್ಚಿನ ನಿರ್ವಹಣೆಯನ್ನು  ನಡೆಸಿದ್ದರು.

                ಗ್ರಿಲ್‍ಗಳು ಮತ್ತು ಅವುಗಳನ್ನು ಜೋಡಿಸಲು ಮೊಳೆಗಳು ಸೇರಿದಂತೆ ಎಲ್ಲವೂ ಮರದಿಂದ ಮಾಡಲ್ಪಟ್ಟಿದೆ. ಮೂವರು ಏಕಕಾಲಕ್ಕೆ ಸವಾರಿ ಮಾಡಬಹುದು. ಇದು ಒಬ್ಬ ವ್ಯಕ್ತಿಗೆ ಆಸನವನ್ನು ಸಹ ಹೊಂದಿದೆ. ಲಿಫ್ಟ್ ಒಳಗೆ ಕನ್ನಡಿಯೂ ಇದೆ. 100 ಕೋಣೆಗಳ ಅರಮನೆಯು ಒಂದರಿಂದ ಎರಡು ಮಹಡಿಗಳನ್ನು ಸಂಪರ್ಕಿಸುವ ಲಿಫ್ಟ್ ಅನ್ನು ಹೊಂದಿದೆ. ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಲಿಫ್ಟ್ ಅನ್ನು ಪುನಃ ಸಕ್ರಿಯಗೊಳಿಸಲಾಗಿದೆ ಎಂದು ಅಶ್ವತಿ ತಿರುನ್ನಾಳ್ ಗೌರಿಲಕ್ಷ್ಮಿ ಭಾಯಿ ಹೇಳಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries