HEALTH TIPS

ಸೌರಶಕ್ತಿಗೆ ಬಲ ತುಂಬಲು ನಿರ್ಮಲಾ ಚಿತ್ತ: ಪಿಎಂ ಸೂರ್ಯ ಘರ್ ಯೋಜನೆಯಡಿ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್

          ವದೆಹಲಿ: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರದ ಮೊದಲ ಬಜೆಟ್​ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಗೃಹ ಮತ್ತು ಕೈಗಾರಿಕೆಗಳಲ್ಲಿ ಬಳಸುವ ವಿದ್ಯುತ್ ನ ಸ್ಥಿರತ ವೃದ್ಧಿಗಾಗಿ ಈ ಯೋಜನೆಯಲ್ಲಿ ಹಲವು ಹೊಸ ನೀತಿ ನತ್ತು ಉಪಕ್ರಮಗಳನ್ನು ಅಳವಡಿಸಲಾಗಿದೆ.

          ಭಾರತದ ಇಂಧನ ಭವಿಷ್ಯಕ್ಕಾಗಿ ಅನುಸರಿಸಬೇಕಾದ ಸರಿಯಾದ ಮಾರ್ಗಗಳನ್ನು ನೀಲನಕ್ಷೆ ರಚಿಸಿ ಹೊಸ ನೀತಿ ದಾಖಲೆಯನ್ನು ರೂಪಿಸಲಾಗಿದೆ. ಈ ದಾಖಲೆಯು ಭಾರತವು ಹೆಚ್ಚು ಸುಸ್ಥಿರ ಮತ್ತು ಭದ್ರವಾದ ಶಕ್ತಿಯ ಮೂಲಗಳನ್ನು ಹೊಂದಲು ಮಾರ್ಗದರ್ಶನ ನೀಡಲಿದೆ.             ಪುನಶ್ಚೇತನಗೊಳಿಸಲಾಗದ ಇಂಧನ ಮೂಲಗಳ ಬಳಕೆಯನ್ನು ಕಡಿಮೆಗೊಳಿಸುವ ಬಗ್ಗೆ ಇದು ಗಮನ ಕೇಂದ್ರೀಕರಿಸಲಿದೆ.

               ಈಗಾಗಲೇ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ಸಲುವಾಗಿ 2024ರ ಕೇಂದ್ರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಘೋಷಿಸಲಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು 1 ಕೋಟಿ ಕುಟುಂಬಗಳಿಗೆ 300 ಘಟಕಗಳವರೆಗೆ ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ 1 ಕೋಟಿ ಕುಟುಂಬಗಳು ಉಚಿತ ವಿದ್ಯುತ್‌ಗಾಗಿ ಸೌರ ಫಲಕಗಳ ಪ್ರಯೋಜನವನ್ನು ಪಡೆಯುತ್ತವೆ.ಇದಕ್ಕೆ ಪ್ರಾರಂಭಿಕ ಹಂತದಲ್ಲೇ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಬಲ ತುಂಬಲು ನಿರ್ಧರಿಸಿದೆ. ಈಗಾಗಲೇ ಅಗಾಧವಾದ ಪ್ರತಿಕ್ರಿಯೆಯನ್ನು ಕಂಡಿದೆ. 1.28 ಕೋಟಿ ನೋಂದಣಿಗಳು ಮತ್ತು 14 ಲಕ್ಷ ಅರ್ಜಿಗಳು ಬಂದಿವೆ.

ಪರಿಣಾಮಕಾರಿ ವಿದ್ಯುತ್ ಬಳಕೆಗಾಗಿ ಹೊಸ ಪಂಪ್ ಸ್ಟೋರೇಜ್ ನೀತಿಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ ಕಡಿಮೆ ಬೇಡಿಕೆ ಇರುವ ಸಮಯದಲ್ಲಿ ವಿದ್ಯುತ್ ಅನ್ನು ಸಂಗ್ರಹಿಸಿ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ನೀಡುವ ಸಲುವಾಗಿ ಇದು ಪರಿಣಾಮಕಾರಿ ಪದ್ಧತಿಯಾಗಿದೆ.
          ಈ ಯೋಜನೆಯ ಪ್ರಯೋಜನಗಳು ವೆಚ್ಚ ಉಳಿತಾಯವನ್ನು ಮೀರಿ ವಿಸ್ತರಿಸುತ್ತವೆ. ಮೇಲ್ಛಾವಣಿಯ ಸೌರಶಕ್ತಿಯ ವ್ಯಾಪಕ ಅಳವಡಿಕೆಯು ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಅನ್ನು ಸುಗಮಗೊಳಿಸುತ್ತದೆ, ಸೌರ ಫಲಕಗಳನ್ನು ಪೂರೈಸುವ ಮತ್ತು ಸ್ಥಾಪಿಸುವ ಮಾರಾಟಗಾರರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ಉತ್ಪಾದನೆ, ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

            ಮನೆ ಮಾಲೀಕರಿಗೆ ಸೌರ ಮೇಲ್ಛಾವಣಿಗಳನ್ನು ಸ್ಥಾಪಿಸಲು ಸರ್ಕಾರವು ಆರ್ಥಿಕವಾಗಿ ಕಾರ್ಯಸಾಧ್ಯವಾಗುವಂತೆ ಮಾಡಿದೆ, ರೂಫ್‌ಟಾಪ್ ಸೋಲಾರ್ ಪ್ರೋಗ್ರಾಂ ಹಂತ-II ಅಡಿಯಲ್ಲಿ ಪ್ರತಿ ಕಿಲೋ ವ್ಯಾಟ್​ಗೆ 9,000ರಿಂದ 18,000 ರೂ.ವರೆಗೆ ಸಬ್ಸಿಡಿಗಳನ್ನು ನೀಡುತ್ತದೆ.

             ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಸೂರ್ಯ ಘರ್ ಯೋಜನೆಯ ಮೂಲಕ ಇಂಧನ ಇಲಾಖೆಗೆ ವಿಶೇಷ ಗಮನ ನೀಡಿದರು. ಅಲ್ಲದೆ, ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries