ಕೊಟ್ಟಾಯಂ: ನಿರ್ಮಾಣ ಕ್ಷೇತ್ರದಲ್ಲಿ ರಾಜ್ಯದಲ್ಲಿ ದೊಡ್ಡ ದಾಖಲೆ ನಿರ್ಮಾಣವಾಗಿದೆ. ೨೦೨೨-೨೩ರಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಗಳು ನೀಡಿದ ಪರವಾನಿಗೆಗಳ ಸಂಖ್ಯೆ ೩೨೮,೫೧೮ ಆಗಿದ್ದು, ೨೦೨೩-೨೪ರಲ್ಲಿ ೩೫೯,೩೩೧ಕ್ಕೆ ಏರಿಕೆಯಾಗಿದೆ.
೩೦೮೧೩ ಪರ್ಮಿಟ್ ಅಥವಾ ೯.೩೭ ಶೇಕಡಾ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಂದು ಆರ್ಥಿಕ ವರ್ಷದಲ್ಲಿ ನಗರಗಳಲ್ಲಿನ ಅನುಮತಿಗಳು ೨೦,೩೧೧ ರಿಂದ ೪೦,೪೦೧ ಕ್ಕೆ ಏರಿಕೆಯಾಗಿದೆ. ಹೆಚ್ಚಳ ಹಿಂದಿನ ವರ್ಷಕ್ಕಿಂತ ದ್ವಿಗುಣಗೊಂಡಿದೆ.
ದೊಡ್ಡ ಕಟ್ಟಡಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಕೆ.ರೇರಾ ಅಂಕಿಅAಶಗಳು ತೋರಿಸುತ್ತವೆ. ೨೦೨೨ ರಲ್ಲಿ ಕೇವಲ ೧೫೯ ಯೋಜನೆಗಳು ನೋಂದಾಯಿಸಲ್ಪಟ್ಟಿದ್ದರೆ, ೨೦೨೩ ರಲ್ಲಿ ಇದು ೨೧೧ ಕ್ಕೆ ಏರಿತು, ಇದು ೩೨.೭ ಶೇಕಡಾ ಹೆಚ್ಚಳವಾಗಿದೆ. ೨೦೨೩ರಲ್ಲಿ ೬೮೦೦ ಕೋಟಿ ಮೌಲ್ಯದ ಬೃಹತ್ ವಸತಿ ಸಮುಚ್ಚಯಗಳು ನೋಂದಣಿಯಾಗಿವೆ ಎಂದು ಅಂಕಿಅAಶಗಳು ತೋರಿಸುತ್ತವೆ. ಈ ಅಂಕಿಅAಶಗಳನ್ನು ಸ್ಥಳೀಯಾಡಳಿತ ಇಲಾಖೆಯ ಸಚಿವರು ಬಿಡುಗಡೆ ಮಾಡಿದ್ದಾರೆ.