ಕಾಸರಗೋಡು: 2023 ರ 'ಉಜ್ವಲಬಾಲ್ಯ ಪುರಸ್ಕಾರ'ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರತಿ ವರ್ಷ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಮಥ್ರ್ಯ ತೋರುವ ಮಕ್ಕಳನ್ನು ಪೆÇ್ರೀತ್ಸಾಹಿಸಲು 'ಉಜ್ವಲಬಾಲ್ಯ ಪುರಸ್ಕಾರ' ನೀಡುತ್ತಿದೆ. (ವಿಭಿನ್ನ ಸಾಮಥ್ರ್ಯದ ಮಕ್ಕಳೂ ಅರ್ಜಿ ಸಲ್ಲಿಸಬಹುದು).
ಕಲೆ, ಕ್ರೀಡೆ, ಸಾಹಿತ್ಯ, ವಿಜ್ಞಾನ, ಸಾಮಾಜಿಕ, ಪರಿಸರ ಸಂರಕ್ಷಣೆ, ಐಟಿ ವಲಯ, ಕೃಷಿ, ತ್ಯಾಜ್ಯ ನಿರ್ವಹಣೆ, ಸಮಾಜಸೇವಾ ಕೆಲಸ, ಕರಕುಶಲ, ಶಿಲ್ಪಕಲೆ ಅಥವಾ ಅಸಾಧಾರಣ ಧೈರ್ಯದ ಯಾವುದೇ ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯ ಪ್ರದರ್ಶಿಸಿರಬೇಕು. 6-11 ವರ್ಷ ಮತ್ತು 12-18 ವರ್ಷದ ಮಕ್ಕಳನ್ನು ಪ್ರತ್ಯೇಕ ವಿಭಾಗಗಳ ಮೂಲಕ ಸಾಮಾನ್ಯ ವರ್ಗ ಮತ್ತು ವಿಕಲಚೇತನರ ವಿಭಾಗದಿಂದ ನಾಲ್ಕು ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಮಗುವಿಗೆ ತಲಾ 25,000 ರೂ. ನಗದು ಪ್ರಶಸ್ತಿ ನೀಡಲಾಗುತ್ತದೆ. ಜನವರಿ 1, 2023 ರಿಂದ ಡಿಸೆಂಬರ್ 31, 2023 ರ ಅವಧಿಯಲ್ಲಿ ತಮ್ಮ ಪ್ರಾವೀಣ್ಯತೆಯನ್ನು ಸಾಬೀತುಪಡಿಸಿದ ಮಕ್ಕಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಅರ್ಜಿಯನ್ನು ಆ.15ರ ಮೊದಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994256990)ಅಥವಾ ವೆಬ್‍ಸೈಟ್ ((www.wcd.kerala.gov.in)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.