ನವದೆಹಲಿ: ಕಳೆದ ವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಕೇಂದ್ರ ಬಜೆಟ್ 2024-25ಕ್ಕೆಮಂಗಳವಾರ ಲೋಕಸಭೆ ಅನುಮೋದನೆ ನೀಡಿದೆ.
48.21 ಲಕ್ಷ ಕೋಟಿ ರೂಗಳ ಕೇಂದ್ರ ಬಜೆಟ್ 2024-25ಕ್ಕೆ ಲೋಕಸಭೆ ಇಂದು ಅನುಮೋದನೆ ನೀಡಿದೆ. ಅಂತೆಯೇ ಇದೇ ವೇಳೆ ಕೆಳಮನೆಯು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಬಜೆಟ್ ಅನ್ನು ಧ್ವನಿ ಮತದೊಂದಿಗೆ ಅಂಗೀಕರಿಸಿತು.
ಕೇಂದ್ರ ಬಜೆಟ್ ಮತ್ತು ಜಮ್ಮು ಮತ್ತು ಕಾಶ್ಮೀರ ಬಜೆಟ್ ಅನ್ನು ಲೋಕಸಭೆಯು ಧ್ವನಿ ಮತದಿಂದ ಅಂಗೀಕರಿಸಿತು. ಅದಕ್ಕೆ ಸಂಬಂಧಿಸಿದ ವಿನಿಯೋಗ ಮಸೂದೆಗಳನ್ನೂ ಸದನ ಇದೇ ವೇಳೆ ಅಂಗೀಕರಿಸಿದೆ.
ಬಜೆಟ್ ಕುರಿತ ಚರ್ಚೆಗೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು 2024-25ರ ಅವಧಿಯಲ್ಲಿ ಜಿಡಿಪಿಯ ಶೇ.4.9ಕ್ಕೆ ಮತ್ತು 2025-26ರ ವೇಳೆಗೆ ಶೇ.4.5ಕ್ಕಿಂತ ಕೆಳಗಿಳಿಸಲು ಉದ್ದೇಶಿಸಲಾಗಿದೆ ಎಂದರು.