ಕಾಸರಗೋಡು: ರಾಜ್ಯದಲ್ಲಿ ಇಂಧನದ ಸಮರ್ಥ ಬಳಕೆಯನ್ನು ಉತ್ತೇಜಿಸಲು ಕೇರಳ ಸರ್ಕಾರವು ಸ್ಥಾಪಿಸಿರುವ ಇಂಧನ ಸಂರಕ್ಷಣಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದೊಡ್ಡ ಶಕ್ತಿ ಗ್ರಾಹಕರು, ಮಧ್ಯಮ ಶಕ್ತಿಯ ಗ್ರಾಹಕರು, ಸಣ್ಣ ಇಂಧನ ಗ್ರಾಹಕರು, ಕಟ್ಟಡಗಳು, ಸಂಸ್ಥೆಗಳು ಮತ್ತು ಸಂಘಟನೆಗಳು, ಇಂಧನ ಕಾರ್ಯಕ್ಷಮತೆ ಉತ್ಪನ್ನಗಳ ಪ್ರವರ್ತಕರು, ಆರ್ಕಿಟೆಕ್ಟಿಕಲ್ ಸಂಸ್ಥೆಗಳು ಮತ್ತು ಗ್ರೀನ್ ಬಿಲ್ಡಿಂಗ್ ಕನ್ಸಲ್ಟೆನ್ಸಿಗಳು ಎಂಬ ಏಳು ವಿಭಾಗಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಮೂರು ಆರ್ಥಿಕ ವರ್ಷಗಳ ಇಂಧನ ಸಂರಕ್ಷಣಾ ಚಟುವಟಿಕೆಗಳ ಆಧಾರದ ಮೇಲೆ ಪ್ರಶಸ್ತಿ ನೀಡಲಾಗುತ್ತದೆ. ನಗದು ಪ್ರಶಸ್ತಿ ಮತ್ತು ಫಲಕ ಹಾಗೂ 'ಐಎಸ್‍ಓ-50001' ಮತ್ತು ಶಕ್ತಿಯ ಲೆಕ್ಕಪರಿಶೋಧನೆ ಮುಂತಾದುವುಗಳನ್ನು ಕಾರ್ಯಗತಗೊಳಿಸಲಿರುವ ಪ್ರಯೋಜನಗಳೂ, ಪ್ರಶಸ್ತಿಗಾಗಿ ಶಾರ್ಟ್‍ಲಿಸ್ಟ್ ಹೊಂದಿದವರಿಗೆ ಸರ್ಟಿಫೈಡ್ ಎನರ್ಜಿ ಆಡಿಟರ್/ಮ್ಯಾನೇಜರ್ ಪರೀಕ್ಷೆಗೆ ಹಾಜರಾಗಲು ದಾಖಲಾತಿಗಳು ಸಹಾಯಕವಾಗಲಿದೆ.
ಅರ್ಜಿ ನಮೂನೆಯನ್ನು ಇಒಅ ವೆಬ್‍ಸೈಟ್ ತಿತಿತಿ.ಞeಡಿಚಿಟಚಿeಟಿeಡಿgಥಿ.gov.iಟಿ ನಿಂದ ಡೌನ್‍ಲೋಡ್ ಮಾಡಬಹುದು. ಅರ್ಜಿಗಳನ್ನು www.keralaenergy.gov.in ಮೇಲ್ ಐಡಿಗೆ ಕಳುಹಿಸಬೇಕು. ಈ ಬಗ್ಗೆ ಹೆಚ್ಚಿನ ಮಾಃಇತಿಗೆ ದೂರವಾಣಿ ಸಂಖ್ಯೆ(0471 2594922, 2594924)ಸಂಪರ್ಕಿಸಬಹುದು. ಅಕ್ಟೋಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುವುದಾಘಿ ಪ್ರಕಟಣೆ ತಿಳಿಸಿದೆ.