ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು 2025ರ, ಫ್ರಬ್ರವರಿ 2ರಿಂದ 10ರ ತನಕ ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿಗಳ ಕಾರ್ಮಿಕತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿಗಳಾಗಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಅನುವಂಶಿಕ ಮೊಕ್ತೇಸರ ದಾನ ಮಾರ್ತಾಂಡವರ್ಮ ರಾಜ ಯಾನೆ ರಾಮಂತರಸುಗಳು- 13 ಮಾಯಿಪ್ಪಾಡಿ ಅರಮನೆ, ಪವಿತ್ರಪಾಣಿ ಡಾ. ಕಿಶೋರ್ ಕುಮಾರ್ ಉಬ್ರಂಗಳ, ನಾರಂಪಾಡಿಗುತ್ತು ದೈವಸ್ಥಾನದ ಬಾಲಕೃಷ್ಣ ರೈ, ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷರಾಗಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಅಧ್ಯಕ್ಷರಾಗಿ ನಿತ್ಯಾನಂದ ಶೆಣೈ ಬದಿಯಡ್ಕ, ಉಪಾಧ್ಯಕ್ಷರುಗಳಾಗಿ ಸುಬ್ರಹ್ಮಣ್ಯ ಭಟ್ ತಲೇಕ, ಬಾಲಕೃಷ್ಣ ರೈ ನಾರಂಪಾಡಿಗುತ್ತು, ಮಧುಕರ ರೈ ಕೊರೆಕ್ಕಾನ, ಕಿರಣ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಶಂಕರನಾರಾಯಣ ಮಯ್ಯ, ಮಧುಸೂದನ ಆಯರ್ ಮಂಗಳೂರು, ಕುಂಞÂರಾಮ ಗೋಸಾಡ, ವಾಸುದೇವ ಭಟ್ ಉಪ್ಪಂಗಳ, ಗೋಪಾಲಕೃಷ್ಣ ಪೈ ಬದಿಯಡ್ಕ, ಜಗದೀಶ್ ರಾವ್ ಪೈಕಾನ, ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಗಣೇಶ ವತ್ಸ ನೆಕ್ರಾಜೆ, ನ್ಯಾಯವಾದಿ ನಾರಾಯಣ ಭಟ್ ಮವ್ವಾರು, ವಸಂತ ಪೆÇಡಿಪ್ಪಳ, ಡಾ. ಶ್ರೀನಿಧಿ ಸರಳಾಯ, ಪದ್ಮನಾಭ ಮಣಿಯಾಣಿ ನಾರಂಪಾಡಿ, ತ್ಯಾಂಪಣ್ಣ ಭಂಡಾರಿ ನಾರಂಪಾಡಿಗುತ್ತು, ಪದ್ಮನಾಭ ಭಟ್ ಕೊರೆಕ್ಕಾನ, ರವಿಶಂಕರ ಪುಣಿಂಚಿತ್ತಾಯ ಪಾಲ್ತಾಜೆ, ಐತ್ತಪ್ಪ ಮವ್ವಾರು, ಶಿವದಾಸ ರೈ ನಾರಂಪಾಡಿ, ವಸಂತಿ ಟೀಚರ್ ಅಗಲ್ಪಾಡಿ ಎಂಬವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಕಾರ್ಯದರ್ಶಿಗಳಾಗಿ ಕೃಷ್ಣಮೂರ್ತಿ ಎಡಪ್ಪಾಡಿ, ಹರೀಶ ನಾರಂಪಾಡಿ, ಸೀತಾರಾಮ ರಾವ್ ಪಿಲಿಕೂಡ್ಲು, ಗೋಪಾಲಕೃಷ್ಣ ಮುಂಡೋಳುಮೂಲೆ, ರವೀಂದ್ರ ರೈ ಗೋಸಾಡ, ಕೋಶಾಧಿಕಾರಿಯಾಗಿ ಸೀತಾರಾಮ ಕುಂಜತ್ತಾಯ ಹಾಗೂ ಇತರ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಬ್ರಹ್ಮಕಲಶೋತ್ಸವ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
ಸಭೆಯಲ್ಲಿ ವಿವಿಧ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶ್ರೀ ಕ್ಷೇತ್ರದ ಸೇವಾ ಸಮಿತಿ ಪದಾಧಿಕಾರಿಗಳು, ಭಕ್ತಾಧಿಗಳು, ಸಿಬ್ಬಂದಿಗಳು, ಅರ್ಚಕರು ಮತ್ತಿತರರು ಭಾಗವಹಿಸಿದ್ದರು. ಆರಂಭದಲ್ಲಿ ಶ್ರೀ ಕ್ಷೇತ್ರದ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣಮೂರ್ತಿ ಎಡಪ್ಪಾಡಿ ವಂದಿಸಿದರು.