ಕಣ್ಣೂರು: ಫಿಟ್‍ನೆಸ್ ಸೆಂಟರ್‍ಗೆ ಬಂದಿದ್ದ 20 ವರ್ಷದ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನನ್ನು ಕಣ್ಣೂರಿನಲ್ಲಿ ಬಂಧಿಸಲಾಗಿದೆ.
ಜಿಲ್ಲೆಯ ಪ್ರಮುಖ ನಾಯಕ ಹಾಗೂ ಫಿಟ್ನೆಸ್ ಸೆಂಟರ್ ಮಾಲೀಕ ಎಂ ನಾರಾಯಣನ್ ಕುಟ್ಟಿ ಅವರ ಪುತ್ರ ಶರತ್ ನಂಬಿಯಾರ್ ಬಂಧಿತ ಆರೋಪಿ. ಫಿಟ್ನೆಸ್ ಸೆಂಟರ್ ತಲುಪಿದ ಯುವತಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ ಎಂಬುದು ದೂರು. ಮಹಿಳೆ ನೇರವಾಗಿ ಪಯ್ಯನ್ನೂರು ಠಾಣೆಗೆ ಬಂದು ದೂರು ನೀಡಿದ್ದಾರೆ.
ಯುವತಿ ನೀಡಿರುವ ದೂರಿನ ಪ್ರಕಾರ ನಿನ್ನೆ ಈ ಕಿರುಕುಳ ಘಟನೆ ನಡೆದಿದೆ. ಈ ಹಿಂದೆ ಫಿಸಿಯೋಥೆರಪಿಗೆಂದು ಕೇಂದ್ರಕ್ಕೆ ಬಂದಾಗ ಕಿರುಕುಳ ನೀಡಿದ ಯುವಕನ ವಿರುದ್ಧ ಇಂತಹ ಆರೋಪಗಳು ಕೇಳಿ ಬಂದಿದ್ದವು. ಆದರೆ ಯಾರೂ ದೂರು ದಾಖಲಿಸಲು ಮುಂದಾಗಿರಲಿಲ್ಲ.