ನವದೆಹಲಿ: ಆನ್‌ಲೈನ್‌ನಲ್ಲಿ ಹೆಚ್ಚು ಹಣ ಗಳಿಸುವುದಾಗಿ ಆಮಿಷವೊಡ್ಡಿ ದೆಹಲಿ ಮೂಲದ ವ್ಯಕ್ತಿಗೆ ಸುಮಾರು ₹20 ಲಕ್ಷ ವಂಚಿಸಿದ ಆರೋಪದಡಿ ಪಿಎಚ್.ಡಿ ಸಂಶೋಧನಾರ್ಥಿಯನ್ನು ಹೈದರಾಬಾದ್‌ನಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಲಕ್ಕು ಅಖಿಲೇಶ್ವರ್ ರೆಡ್ಡಿ ತೆಲಂಗಾಣದ ನಿವಾಸಿ.

ದೆಹಲಿಯ ದ್ವಾರಕಾ ನಿವಾಸಿ ಅಕ್ಷಯ್ ಕುಮಾರ್ ಸಿಂಗ್ ಅವರು ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ (ಎನ್‌ಸಿಆರ್‌ಪಿ) ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಕಳೆದ ವರ್ಷ ನವೆಂಬರ್ 23ರಂದು ಟೆಲಿಗ್ರಾಮ್‌ನಲ್ಲಿ ಅರೆಕಾಲಿಕ ಉದ್ಯೋಗದ ಕುರಿತು ಸಂದೇಶವನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದರು ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ಹೇಳಿದ್ದಾರೆ.
ಆರೋಪಿಗಳು ಕ್ರಿಪ್ಟೋಕರೆನ್ಸಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವೆಬ್‌ಸೈಟ್‌ನಲ್ಲಿ ಖಾತೆ ರಚಿಸುವಂತೆ ಅಕ್ಷಯ್ ಅವರಿಗೆ ಸೂಚಿಸಿದ್ದರು ಮತ್ತು ಪ್ರಕ್ರಿಯೆಯ ನೆಪದಲ್ಲಿ ಮೊದಲೇ ಹಲವು ಬಾರಿ ಹಣ ಪಾವತಿ ಮಾಡುವಂತೆ ಕೇಳಿದ್ದರು. ಈ ವಿಷಯವು ದೂರಿನಲ್ಲಿ ನಮೂದಾಗಿದೆ ಎಂದು ಅಂಕಿತ್ ಸಿಂಗ್ ತಿಳಿಸಿದ್ದಾರೆ.
'ಆರೋಪಿಯ ಸೂಚನೆಯಂತೆ ದೂರುದಾರರು ₹20.16 ಲಕ್ಷ ರೂಪಾಯಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ದೂರನ್ನು ಸ್ವೀಕರಿಸಿದ ನಂತರ, ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ' ಎಂದು ಡಿಸಿಪಿ ಹೇಳಿದರು.
ದೆಹಲಿ ಪೊಲೀಸ್ ತಂಡ ಹೈದರಾಬಾದ್‌ಗೆ ತೆರಳಿ ಜುಲೈ 11ರಂದು ಅಖಿಲೇಶ್ವರ್ ರೆಡ್ಡಿಯನ್ನು ಬಂಧಿಸಿತು.