ತಿರುವನಂತಪುರ: ರಾಜ್ಯದಲ್ಲಿ ನಿಪಾ ನಿಗಾದಲ್ಲಿದ್ದ ೨೦ ಮಂದಿಯ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ.
ಪ್ರಸ್ತುತ, ಸಂಪರ್ಕ ಪಟ್ಟಿಯಲ್ಲಿ ೪೭೨ ಜನರಿದ್ದು, ಅದರಲ್ಲಿ ೨೨೦ ಜನರು ಹೈ ರಿಸ್ಕ್ ವಿಭಾಗದಲ್ಲಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಇದುವರೆಗೆ ಒಟ್ಟು ೮೬೦ ಜನರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ.
ಸಂಪರ್ಕ ಪಟ್ಟಿಯಲ್ಲಿರುವವರ ಎಲ್ಲಾ ಪರೀಕ್ಷೆಯ ಫಲಿತಾಂಶಗಳು ನೆಗೆಟಿವ್ ಬಂದಿವೆ. ಆದರೆ ಇಲ್ಲಿಯವರೆಗೆ ನಿಪಾ ಸೋಂಕು ಹರಡುವ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಆರೋಗ್ಯ ಸಚಿವೆ ವೀಣಾ ಜಾರ್ಜ್ ನಮ್ಮ ಜಾಗ್ರತೆ ಕ್ರಮಗಳಿಂದ ಹಿಂದೆ ಸರಿಯಬಾರದು ಎಂದು ಕೇಳಿಕೊಂಡಿದ್ದಾರೆ.