ಮಂಜೇಶ್ವರ : ಹೊಸಂಗಡಿಯ ಯಕ್ಷಬಳಗ ಯಕ್ಷಗಾನ ಸಂಘದ ವತಿಯಿಂದ 34ನೇ ವರ್ಷದ ಕರ್ಕಾಟಕ ಮಾಸ ತಾಳಮದ್ದಳೆ ಕೂಟ ಉದ್ಘಾಟನೆ ಜುಲೈ 21 ರಂದು ಅಪರಾಹ್ನ ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಲಿದೆ. ಬಳಿಕ ತಂಡದ ಸದಸ್ಯರಿಂದ ‘ಕಿರಾತಾರ್ಜುನʼ ತಾಳಮದ್ಧಳೆ ಜರಗಲಿದೆ.
ಜುಲೈ 28ರಂದು ಶ್ರೀಮದ್ ಎಡನೀರು ಮಠಾಧೀಶರ ಚಾತುರ್ಮಾಸ್ಯ ಸಂದರ್ಭ, ‘ಭೀಷ್ಮ ಸೇನಾಧಿಪತ್ಯʼ , ಅಗೋಸ್ತು 4 ರಂದು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯದಲ್ಲಿ ‘ಕೃμÁ್ಣರ್ಜುನʼ ಆಗಸ್ಟ್ 11 ರಂದು ಶ್ರೀ ಶಂಕರನಾರಾಯಣ ವಿನಾಯಕ ದೇವಸ್ಥಾನ ಕೋಳ್ಯೂರು ಸನ್ನಿಧಿಯಲ್ಲಿ ‘ಅತಿಕಾಯ ಮೋಕ್ಷʼ ಪ್ರಸಂಗ ಜರಗಲಿದ್ದು, ಎಲ್ಲಾ ಕಾರ್ಯಕ್ರಮಗಳು ಅಪರಾಹ್ನ 2.30ರಿಂದ ಆರಂಭಗೊಳ್ಳಲಿದೆ.
ಆಗಸ್ಟ್ 18 ರಂದು ಪೂರ್ವಾಹ್ನ 10.ರಿಂದ ಮೂಡಂಬೈಲು ‘ನಾರಾಯಣೀಯಂʼ ಮನೆಯಲ್ಲಿ ಕರ್ಕಾಟಕ ಮಾಸ ತಾಳಮದ್ಧಳೆ ಕೂಟ ಸಮಾರೋಪ, ಹಾಗೂ ‘ಕರ್ಣಾರ್ಜುನʼ ತಾಳಮದ್ಧಲೆ ಜರಗಲಿದ್ದು ಅತಿಥಿ ಕಲಾವಿದರಾಗಿ ಜಬ್ಬಾರ್ ಸಮೋ ಸಂಪಾಜೆ, ಹಾಗೂ ರಾಧಾಕೃಷ್ಣ ಕಲ್ಚಾರ್ ಭಾಗವಹಿಸಲಿದ್ದಾರೆ. ಈ ಸಂದರ್ಭ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಹಿರಿಯರ ನೆನಪು ಕಾರ್ಯಕ್ರಮ ಜರಗಲಿದ್ದು ಮೀಯಪದವು ಕೃಷ್ಣ ರಾವ್ ಅವರ ಸಂಸ್ಮರಣೆ ನಡೆಯಲಿದೆ. ಹಾಗೂ ಹರಿಶ್ಚಂದ್ರ ನಾಯ್ಗ ಮಾಡೂರು ಅವರಿಗೆ ಯಕ್ಷಬಳಗವತಿಯಿಂದ ಗೌರವಾರ್ಪಣೆ ನಡೆಯಲಿದೆ ಎಂದು ಯಕ್ಷಬಳಗ ಸಂಚಾಲಕ ಸತೀಶ ಅಡಪ ಸಂಕಬೈಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.