ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜು. 21ರಂದು ಶ್ರೀ ಮಠದಲ್ಲಿ ಆರಂಭಗೊಳ್ಳಲಿದೆ. ಮಧ್ಯಾಃನ 2.30ಕ್ಕೆ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಖ್ಯಾತ ಉದ್ಯಮಿ ಕೆ.ಕೆ ಶೆಟ್ಟಿ ಸಮಾರಂಭ ಉದ್ಘಾಟಿಸುವರು. ಶಾಸಕ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸುವರು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಘಿ ಭಾಗವಹಿಸುವರು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ. ಶ್ಯಾಮ ಭಟ್ ಐ.ಎ.ಎಸ್ ಗೌರವ ಉಪಸ್ಥಿತರಿರುವರು.
ಸಂಜೆ 4ಕ್ಕೆ ಬಳ್ಳಪದವು ಯೋಗೀಶ್ ಶರ್ಮ ಮತ್ತು ಬಳಗದವರಿಂದ ಭಕ್ತಿ ಸಂಗೀತ ನಡೆಯುವುದು. ಯೋಗೀಶ್ ಶರ್ಮ ಬಳ್ಳಪದವು ಹಾಡುಗಾರಿಕೆ, ಮಾಞೂರ್ ರಂಜಿತ್ ವಯಲಿನ್, ಚೇರ್ತಲ ಜಿ. ಕೃಷ್ಣ ಕುಮಾರ್ ಮೃದಂಗ, ಮಾಞೂರ್ ಉನ್ಣಿಕೃಷ್ಣನ್ ಘಟಂ, ರತ್ನಶ್ರೀ ಅಯ್ಯರ್ ವೈಕ್ಕಂ ತಬಲಾದಲ್ಲಿ ಸಹಕರಿಸುವರು. ಸಂಜೆ 7ರಿಂದ ಬಡಗು ಯಕ್ಷ ವೈಭವದಲ್ಲಿ'ಕಾಳಿದಾಸ ದಾಕ್ಷಾಯಿಣಿ'ಯಕ್ಷಗಾನ ಬಯಲಾಟ ಜರುಗಲಿರುವುದು.