ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ತಮ್ಮ 21 ನೇ ಚಾತುರ್ಮಾಸ್ಯ ವ್ರತಸಂಕಲ್ಪವನ್ನು ಗುರುಪೂರ್ಣಿಮೆ ದಿನವಾದ ಭಾನುವಾರ ಪ್ರಾರಂಭಗೊಂಡಿತು. ಬೆಳಿಗ್ಗೆ 9. ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತಾಭೀಷೇಕ, ಸೀಯಾಳಾಭೀಷೇಕ, 10.30 ಕ್ಕೆ ವ್ಯಾಸಪೂಜೆ ಆರಂಭವಾಗಿ 12.00 ಕ್ಕೆ ಮಂಗಳಾರತಿ, 12.30 ಕ್ಕೆ ಮಹಾಪೂಜೆ ನಡೆಯಿತು. ಬಳಿಕ ಅನ್ನಪ್ರಸಾದ ನಡೆಯಿತು.
ಸಂಜೆ 7 ಕ್ಕೆ ಶ್ರೀ ಗುರುಪಾದುಕಾ ಪೂಜೆ, ಭಜನೆ ನಂತರ ಪರಮಪೂಜ್ಯ ಶ್ರೀಗಳಿಂದ ಸತ್ಸಂಗ ನಡೆಯಿತು. ಶ್ರೀಗಳ ಚಾತುರ್ಮಾಸ್ಯ ವ್ರತಾನುಷ್ಠಾನ ಸೆ.18 ರಂದು ಸಂಪನ್ನಗೊಳ್ಳಲಿದೆ. ಚಾತುರ್ಮಾಸ್ಯದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಸಂಜೆ 5.30 ರಿಂದ 7 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾಸೇವೆ ನಡೆಯಲಿದ್ದು, ಪ್ರತೀ ಭಾನುವಾರ ವಿದ್ವಾಂಸರಿಂದ ಪ್ರವಚನ, ಯಕ್ಷಗಾನ ತಾಳಮದ್ದಳೆ, ಭರತನಾಟ್ಯ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.