ಮುಂಬೈ: ತನ್ನ ಶತ್ರುಗಳ ಹೆಸರನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಮುಂಬೈನ ವರ್ಲಿ ಪ್ರದೇಶದಲ್ಲಿ ನಡೆದಿದೆ.
ಮುಂಬೈ: ತನ್ನ ಶತ್ರುಗಳ ಹೆಸರನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಮುಂಬೈನ ವರ್ಲಿ ಪ್ರದೇಶದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಐವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ ಹಾಗೂ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಗುರು ವಾಗ್ಮೋರೆ (48) ಎಂಬುವವನೇ ಕೊಲೆಯಾದವ. ಈತ ತನ್ನ 22 ಶತ್ರುಗಳ ಹೆಸರನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಬುಧವಾರ ಬೆಳಿಗ್ಗೆ ವರ್ಲಿ ಪ್ರದೇಶದ ಸ್ಪಾ ಒಂದರಲ್ಲಿ ಗುರುವಿನ ಮೇಲೆ ದಾಳಿಯಾಗಿತ್ತು.
ಮೈಮೇಲೆ ಟ್ಯಾಟೂವಿನಲ್ಲಿ ಹೆಸರಿದ್ದವರೇ ಗುರುವನ್ನು ಕೊಲೆ ಮಾಡಿದ್ದು ಬಂಧಿತ ಐವರ ಹೆಸರು ಟ್ಯಾಟೂ ರೂಪದಲ್ಲಿ ಗುರುವಿನ ಮೈಮೇಲೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗುರು ವಿರುದ್ಧ ಮುಂಬೈನ ವಿವಿಧ ಠಾಣೆಗಳಲ್ಲಿ 22 ಪ್ರಕರಣ ದಾಖಲಾಗಿವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.