ಕೋಝಿಕ್ಕೋಡ್: ವಡಕರ ಮೇಮುಂಡ ಹೈಯರ್ ಸೆಕೆಂಡರಿ ಶಾಲೆಯ 23 ವಿದ್ಯಾರ್ಥಿಗಳಿಗೆ ಜಾಂಡೀಸ್ ಇರುವುದು ದೃಢಪಟ್ಟಿದೆ. ವಿಲ್ಲ್ಯಪಲ್ಲಿ, ಆಯಂಚೇರಿ, ಮಣಿಯೂರ್ ಮತ್ತು ವೇಲಂ ಪ್ರದೇಶದ ವಿದ್ಯಾರ್ಥಿಗಳಿಗೆ ಕಾಮಾಲೆ ಪತ್ತೆಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿರುವ ಮೂರು ಅಂಗಡಿಗಳನ್ನು ಮುಚ್ಚುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ. ಅಂಗಡಿಗಳಲ್ಲಿ ಬಳಸುತ್ತಿದ್ದ ನೀರನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.