ನವದೆಹಲಿ: ದೇಶದಲ್ಲಿ 18ನೇ ಲೋಕಸಭೆ ರಚನೆಯಾಗಿ ಮೋದಿ ಸರ್ಕಾರವು ತನ್ನ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸಲು ಹೊರಟಿದ್ದು ಕೇಂದ್ರ ಬಜೆಟ್ 2024ರ ದಿನಾಂಕಗಳನ್ನು ಸಹ ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಬಜೆಟ್ ಅಧಿವೇಶನದ ಬಗ್ಗೆ ಮಾಹಿತಿ ನೀಡಿದರು. 2024-25ರ ಕೇಂದ್ರ ಬಜೆಟ್ ಅನ್ನು 2024ರ ಜುಲೈ 23ರಂದು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಬರೆದಿದ್ದಾರೆ.
ಕೇಂದ್ರ ಬಜೆಟ್ 2024ರ ದಿನಾಂಕಗಳನ್ನು ಘೋಷಿಸುವುದರೊಂದಿಗೆ, ಮೋದಿ 3.0 ಸರ್ಕಾರದ ಅಡಿಯಲ್ಲಿ ಹಣಕಾಸು ಸಚಿವರು ತೆರಿಗೆದಾರರಿಗೆ ಕೆಲವು ಪ್ರಯೋಜನಗಳನ್ನು ಘೋಷಿಸಬಹುದು ಎಂದು ಬಹಳಷ್ಟು ನಿರೀಕ್ಷೆ ಮತ್ತು ಊಹಾಪೋಹಗಳಿವೆ. ಏತನ್ಮಧ್ಯೆ, ಸುದ್ದಿ ಸಂಸ್ಥೆ ರಾಯಿಟರ್ಸ್ ಎರಡು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರವು ಕೇಂದ್ರ ಬಜೆಟ್‌ನಲ್ಲಿ ಗ್ರಾಮೀಣ ವಸತಿಗಾಗಿ ರಾಜ್ಯ ಸಬ್ಸಿಡಿಯನ್ನು ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 50 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ US ಡಾಲರ್ ಅನ್ನು ಮೀರುತ್ತದೆ ಎಂದು ಬರೆದಿದೆ.
ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ವಿಶಿಷ್ಟ ದಾಖಲೆ
ಈ ವರ್ಷ ಎರಡು ಬಾರಿ ಬಜೆಟ್ ಮಂಡಿಸಲಾಗುತ್ತಿದೆ. ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1, 2024 ರಂದು ಮಂಡಿಸಲಾಯಿತು. ಆದರೆ ಇದೀಗ ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಈ ಬಾರಿ ಬಜೆಟ್ ಮಂಡನೆಯೊಂದಿಗೆ ಹಾಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ವಿಶಿಷ್ಟ ದಾಖಲೆ ದಾಖಲಾಗಲಿದೆ. ಏಕೆಂದರೆ, ಈ ಮೂಲಕ ಸತತ ಏಳು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ವಿಷಯದಲ್ಲಿ ಅವರು ಮೊರಾರ್ಜಿ ದೇಸಾಯಿಯವರನ್ನು ಹಿಂದಿಕುತ್ತಾರೆ. ದೇಸಾಯಿ ಅವರು ಸತತ ಆರು ಬಾರಿ ಬಜೆಟ್ ಮಂಡಿಸಿದ್ದರು.